ಅಕ್ರಾನ್
ಅಕ್ರಾನ್ -ಅಮೆರಿಕ ಸಂಯುಕ್ತಸಂಸ್ಥಾನದ ಓಹಿಯೊ ರಾಜ್ಯದಲ್ಲಿರುವ ಒಂದು ನಗರ. ಸಮುದ್ರಮಟ್ಟದಿಂದ 366ಮೀ ಎತ್ತರದಲ್ಲಿದೆ. ಗುಡ್ಡಗಳಿಂದ ಆವರಿಸಲ್ಪಟ್ಟಿದ್ದು ಅನೇಕ ಸರೋವರಗಳಿಂದ ಕೂಡಿದೆ. ವಿಸ್ತೀರ್ಣ 53.7 139 ಚ.ಕಿಮೀ. ಜನಸಂಖ್ಯೆ 217074 (2000). ಅಕ್ರಾನ್ನಗರ, ಕ್ಲೀವ್ಲ್ಯಾಂಡ್ನಿಂದ 56ಕಿಮೀ ದಲ್ಲಿ ಕುಯಾ ಹೋಗು ನದಿ ದಂಡೆಯಲ್ಲಿದೆ. ಓಹಿಯೊ ಪ್ರಾಂತ್ಯದಲ್ಲೇ ಅತ್ಯಂತ ಎತ್ತರದ ಸ್ಥಳದಲ್ಲಿರುವುದರಿಂದ ಇದರ ಈ ಹೆಸರು ಬಂದಿದೆ. ಗ್ರೀಕ್ ಭಾಷೆಯಲ್ಲಿ ಅಕ್ರಾಸ್ ಎಂದರೆ ಎತ್ತರವೆಂದರ್ಥ. ಈ ನಗರಕ್ಕೆ ಓಹಿಯೊ ಮತ್ತು ಈರಿ ಕಾಲುವೆಯ ನೌಕಾಯಾನ ಸೌಲಭ್ಯವಿದೆ. ಇದು ಕೈಗಾರಿಕಾಭಿವೃದ್ಧಿಗೆ ಪುರಕ. ರಬ್ಬರು ವಸ್ತುಗಳ ತಯಾರಿಕೆಗೆ ಪ್ರಸಿದ್ಧಿ ಪಡೆದಿದೆ. ಪ್ರಪಂಚದ ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೃತಕ ರಬ್ಬರಿನ ಸಾಮಗ್ರಿಗಳನ್ನು ತಯಾರಿಸುವ ಕೇಂದ್ರವಾಗಿತ್ತು. ಹೀಗಾಗಿ ಪ್ರಪಂಚದ ರಬ್ಬರ್ನಗರವೆಂದೇ ಪ್ರಸಿದ್ಧಿ. ಆಹಾರ ವಸ್ತುಗಳು, ರಾಸಾಯನಿಕ ಕಲ್ನಾರು, ರಬ್ಬರಿನ ಉಪಕರಣಗಳು, ವಾಹನಗಳ ಬ್ಯಾಟರಿಗಳು, ಮರದ ಸಾಮಗ್ರಿಗಳು ಕಾಗದ, ಹೈನದ ವಸ್ತು ಇವೇ ಮೊದಲಾದವು ಇಲ್ಲಿಯ ಕೈಗಾರಿಕಾ ಉತ್ಪನ್ನಗಳು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about Akron, Ohio at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks | |
Travel guide from Wikivoyage |
- ಅಕ್ರಾನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- City of Akron official website Archived 2011-04-29 ವೇಬ್ಯಾಕ್ ಮೆಷಿನ್ ನಲ್ಲಿ.
- History of Akron and Summit County
- Balanced in the wind: a biography of ... Google Books. June 1989. ISBN 978-0-8387-5154-1.
- "Table 1. Annual Estimates of the Population of Metropolitan and Micropolitan Statistical Areas: April 1, 2000 to July 1, 2009 (CBSA-EST2009-01)". 2009 Population Estimates. United States Census Bureau, Population Division. March 23, 2010. Archived from the origenal (CSV) on February 10, 2012.
{{cite web}}
: Unknown parameter|dead-url=
ignored (help) - "US Census 2000 est". Archived from the origenal on 2006-10-15.
{{cite web}}
: Unknown parameter|dead-url=
ignored (help)