ಪೊರಕೆ
ಪೊರಕೆಯು (ಕಸಬರಿಗೆ) ಸಾಮಾನ್ಯವಾಗಿ ಸ್ಥೂಲವಾಗಿ ಉರುಳೆಯಾಕಾರದ ಹಿಡಿಗೆ ಜೋಡಣೆಗೊಂಡ ಬಿರುಸಾದ ನಾರುಗಳನ್ನು (ಇವನ್ನು ಹಲವುವೇಳೆ ಪ್ಲಾಸ್ಟಿಕ್, ಕೂದಲು, ಅಥವಾ ಮೆಕ್ಕೆಜೋಳದ ಹೊಟ್ಟಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ) ಹೊಂದಿರುವ ಒಂದು ಸ್ವಚ್ಛಗೊಳಿಸುವ ಸಾಧನ. ಹಾಗಾಗಿ ಇದು ಉದ್ದ ಹಿಡಿಯಿರುವ ಕುಂಚದ ಒಂದು ವೈವಿಧ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಮೊರದ ಸಂಯೋಜನೆಯಲ್ಲಿ ಬಳಸಲಾಗುತ್ತದೆ.
"ಗಟ್ಟಿ ಪೊರಕೆ" ಮತ್ತು "ಮೃದು ಪೊರಕೆ" ನಡುವೆ ವ್ಯತ್ಯಾಸ ಮಾಡಲಾಗುತ್ತದೆ. ಮೃದು ಪೊರಕೆಗಳನ್ನು ಗೋಡೆಗಳಿಂದ ಜೇಡರ ಬಲೆಗಳು ಹಾಗೂ ಜೇಡಗಳನ್ನು ಗುಡಿಸಲು ಬಳಸಲಾಗುತ್ತದೆ. ಗಟ್ಟಿ ಪೊರಕೆಗಳನ್ನು ಕಾಲುದಾರಿಗಳ ಮೇಲಿನ ಕಸ ಗುಡಿಸಲು ಬಳಸಲಾಗುತ್ತದೆ. ಬೇರೆ ಬೇರೆ ಬಗೆಯ ಪೊರಕೆ ಇದೆ ಹುಲ್ಲುನಿಂದ ಪೊರಕೆ ತಯಾರಿಸುತ್ತಾರೆ,ಅದೆ ರೀತಿ ತೆಂಗಿನ ಮರದ ಗರಿಯ ಕಡ್ಡಿಯಿಂದ ಪೊರಕೆ ತಯಾರಿಸುತ್ತಾರೆ ಅದೆ ರೀತಿ ಕಂಗಿನ ಸೋಗೆಯ ಕಡ್ಡಿಯಿಂದ ಪೊರಕೆ ತಯಾರಿಸುತ್ತಾರೆ.[೧] .ಉಂದೆನ್ ಕಂಗ್‌ದ ಸೋಗೆಡ್ಡ್ ಮಲ್ಪುವೆರ್ ಅಂಚನೆ ತಾರೆದ ಮಡಲ್ಡ್ ಮನ್ಪುವೆರ್[೨]
ಕಂಗಿನ ಸೋಗೆಯಿಂದ ಪೊರಕೆ ಮಾಡುವ ವಿಧಾನ
[ಬದಲಾಯಿಸಿ]ಪೊರಕೆ ತಯಾರು ಮಾಡಲು ಕಂಗಿನ ನಾಲ್ಕು ಸೋಗೆ ಬೇಕಾಗುತ್ತದೆ. ಆ ಸೋಗೆಯಿಂದ ಕಡ್ಡಿಯನ್ನು ತೆಗೆದು ಅದರಲ್ಲಿ ಉಳಿದಿರುವ ಸೋಗೆಯನ್ನು ಕೆರೆಸಿ ತೆಗೆಯ ಬೇಕು ಆಮೇಲೆ ಕಡ್ಡಿಯ ಹಿಂದುಗಡೆ ತುದಿಯನ್ನು ಕತ್ತರಿಸಿ ಎಲ್ಲಾ ಕಡ್ಡಿಯನ್ನು ಒಟ್ಟಾಗಿ ಹಿಡಿದು ಗಟ್ಟಿಯಾಗಿ ಕಟ್ಟಿದರೆ ಹಿಡಿಸೂಡಿ ತಯಾರಾಗುತ್ತದೆ .ಇದಲ್ಲದೆ ಇನ್ನೊಂದು ರೀತಿಯಲ್ಲಿ ಕಂಗಿನ ಕಡ್ಡಿಯಿಂದ ಹಿಡಿಸೂಡಿ ತಯಾರಿಸಲಾಗುತ್ತದೆ. ಕಂಗಿನ ಸೋಗೆಯಿಂದ ಕಡ್ಡಿಗಳನ್ನು ಬೇರ್ಪಡಿಸಿ ಅದನ್ನು ಬಿಸಿಲಲ್ಲಿ ಒಣಗಲು ಹಾಕ ಬೇಕು ಮೂರು ನಾಲ್ಕು ದಿವಸ ಒಣಗಿದ ನಂತರ ಇಲ್ಲಾ ಕಡ್ಡಿಗಳನ್ನು ಒಟ್ಟಾಗಿಸಿ ನೆಲದ ಮೇಲೆ ಹಾಕಿ ನಮ್ಮ ಕೈಗಳ ಸಹಾಯದಿಂದ ಉಜ್ಜ ಬೇಕು ಆಗ ಅದರಲ್ಲಿ ಸ್ವಲ್ಪ ಸ್ವಲ್ಪ ಉಳಿದಿದ್ದ ಸೋಗೆಗಳು ಉದುರಿ ಚಂದದ ಕಡ್ಡಿಗಳು ಸಿಗುತ್ತದೆ ಅದನ್ನು ಗಟ್ಟಿ ಸೂಡಿಯನ್ನಾಗಿ ಹಗ್ಗದಿಂದ ಕಟ್ಟಬೇಕು
ತೆಂಗಿನ ಕಡ್ಡಿಯ ಪೊರಕೆ ತಯಾರಿಸುವ ವಿಧಾನ
[ಬದಲಾಯಿಸಿ]ಪೊರಕೆ ತಯಾರು ಮಾಡಲು ಒಳ್ಳೆ ಒಣಗಿರುವ ಅಥವಾ ಲುಂಗೆಲ್ ಒಳ್ಳೆ ಬಲಿತ ತೆಂಗಿನ ಗರಿಯಿಂದ ಕಡ್ಡಿಗಳನ್ನು ಬೇರ್ಪಡಿಸಿ ಅದರಲ್ಲಿ ಅಲ್ಪ ಸ್ವಲ್ಪ ಉಳಿದಿರುವ ಗರಿಯನ್ನು ಕೆರೆಸಿ ತೆಗೆಯ ಬೇಕು ಕಡ್ಡಿಯ ಹಿಂದುಗಡೆ ತುದಿಯನ್ನು ಕತ್ತರಿಸಿ ಎಲ್ಲಾ ಕಡ್ಡಿಯನ್ನು ಒಟ್ಟಾಗಿ ಹಿಡಿದು ಗಟ್ಟಿಯಾಗಿ ಕಟ್ಟಿದರೆ ಹಿಡಿಸೂಡಿ ತಯಾರಾಗುತ್ತದೆ .ಇದಲ್ಲದೆ ಇನ್ನೊಂದು ರೀತಿಯಲ್ಲಿ ತೆಂಗಿನ ಕಡ್ಡಿಯಿಂದ ಹಿಡಿಸೂಡಿ ತಯಾರಿಸಲಾಗುತ್ತದೆ . ತೆಂಗಿನ ಗರಿಯಿಂದ ಕಡ್ಡಿಗಳನ್ನು ಬೇರ್ಪಡಿಸಿ ಅದನ್ನು ಬಿಸಿಲಲ್ಲಿ ಒಣಗಲು ಹಾಕ ಬೇಕು ಮೂರು ನಾಲ್ಕು ದಿವಸ ಒಣಗಿದ ನಂತರ ಇಲ್ಲಾ ಕಡ್ಡಿಗಳನ್ನು ಒಟ್ಟಾಗಿಸಿ ನೆಲದ ಮೇಲೆ ಹಾಕಿ ನಮ್ಮ ಕೈಗಳ ಸಹಾಯದಿಂದ ಉಜ್ಜ ಬೇಕು ಆಗ ಅದರಲ್ಲಿ ಸ್ವಲ್ಪ ಸ್ವಲ್ಪ ಉಳಿದಿದ್ದ ಗರಿಗಳು ಉದುರಿ ಚಂದದ ಕಡ್ಡಿಗಳು ಸಿಗುತ್ತದೆ ಅದನ್ನು ಗಟ್ಟಿ ಸೂಡಿಯನ್ನಾಗಿ ಹಗ್ಗದಿಂದ ಕಟ್ಟಬೇಕು
ಚಿತ್ರಸಂಪುಟ
[ಬದಲಾಯಿಸಿ]-
ಚೀನಾದಲ್ಲಿ ಬಳಸಲಾಗುವ ಮೃದು ಪೊರಕೆ
-
ಫ಼ಿಲಿಪೀನ್ಸ್ನ ಸಾಮಾನ್ಯ ಮೃದು ಪೊರಕೆಗಳು
-
ಫ಼ಿಲಿಪೀನ್ಸ್ನ ಗಟ್ಟಿ ಪೊರಕೆಗಳು. ಇವನ್ನು ಹಲವುವೇಳೆ ತೆಂಗಿನ ನಾರುಗಳಿಂದ ತಯಾರಿಸಲಾಗುತ್ತದೆ.
-
ತೆಳು ರೆಂಬೆಗಳಿಂದ ತಯಾರಿಸಲಾದ ರುವಾಂಡಾದ ಒಂದು ಪೊರಕೆ
ಉಲ್ಲೇಖಗಳು
[ಬದಲಾಯಿಸಿ]