ಅಣು ವೈದ್ಯಶಾಸ್ತ್ರ
ಅಣು ವೈದ್ಯಶಾಸ್ತ್ರ ವು ವೈದ್ಯಶಾಸ್ತ್ರದ ಮತ್ತು ವೈದ್ಯಕೀಯ ಚಿತ್ರಗ್ರಹಣದ ಒಂದು ವಿಶೇಷ ವಿಭಾಗವಾಗಿದ್ದು, ಈ ವಿಧಾನದ ವೈದ್ಯಕೀಯ ಚಿಕಿತ್ಸೆಯಲ್ಲಿ ವಿಕಿರಣಶೀಲ ನ್ಯೂಕ್ಲೈಡ್ಗಳನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಇದರ ಮೂಲಕ ರೋಗಿಯ ದೇಹ ಚಿತ್ರಣವನ್ನು ತೆಗೆದು ಅದರಲ್ಲಿರಬಹುದಾದ ವಿಕಿರಣಶೀಲ ಕ್ಷಯದ ಸಾಧ್ಯತೆಯನ್ನು ನಿರ್ಣಯಿಸಿ ಚಿಕಿತ್ಸೆ ನೀಡಲಾಗುತ್ತದೆ. ಅಣು ವೈದ್ಯಶಾಸ್ತ್ರ ಕಾರ್ಯವಿಧಾನಗಳಲ್ಲಿ, ವಿಕಿರಣಶೀಲ ನ್ಯೂಕ್ಲೈಡ್ಗಳು ವಿಕಿರಣ ಔಷಧ ವಸ್ತುಗಳನ್ನು ಉತ್ಪಾದನೆ ಮಾಡುವ ಸಲುವಾಗಿ ಇತರ ರಾಸಾಯನಿಕ ಮಿಶ್ರಣಗಳ ಜೊತೆ ಅಥವಾ ಔಷಧ ವಸ್ತುಗಳ ಜೊತೆಗೆ ಸಂಯೋಜಿಸಲ್ಪಡುತ್ತವೆ. ಒಮ್ಮೆ ರೋಗಿಗೆ ಪ್ರಾಶನ ಮಾಡಿಸಲ್ಪಟ್ಟ ಈ ವಿಕಿರಣ ಔಷಧವಸ್ತುಗಳು ಕೆಲವು ನಿರ್ದಿಷ್ಟ ಅಂಗಗಳಿಗೆ ಅಥವಾ ಕೋಶೀಯ ಗ್ರಾಹಕಗಳಿಗೆ ಸ್ಥಾನಿಕವಾಗುತ್ತವೆ. ವಿಕಿರಣ ಔಷಧವಸ್ತುಗಳ ಈ ಗುಣಲಕ್ಷಣವು, ಅಂಗಾಂಶದ ಅಂಗರಚನಾಶಾಸ್ತ್ರದ ದೈಹಿಕ ಬದಲಾವಣೆಗಳ ಮೇಲೆ ಆಧಾರವಾಗಿರುವುದರ ಬದಲಾಗಿ, ಕೋಶೀಯ ಕಾರ್ಯ ಮತ್ತು ಶರೀರ ವಿಜ್ಞಾನದ ಮೇಲೆ ಅವಲಂಬಿತವಾಗಿ ಅಣು ವೈದ್ಯಶಾಸ್ತ್ರಕ್ಕೆ ದೇಹದಲ್ಲಿನ ಒಂದು ರೋಗದ-ಪ್ರಕ್ರಿಯೆಯ ವ್ಯಾಪ್ತಿಯನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಅನುಮತಿಸುತ್ತದೆ. ಕೆಲವು ರೋಗಗಳಲ್ಲಿ ಅಣು ವೈದ್ಯಶಾಸ್ತ್ರ ಅಧ್ಯಯನಗಳು ಪ್ರಾಥಮಿಕ ಹಂತಗಳಲ್ಲಿ ಇತರ ರೋಗನಿರ್ಣಯ ಪರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳನ್ನು ಗುರುತಿಸುತ್ತವೆ.
ಚಯಾಪಚಯ ಅಥವಾ ಗ್ರಹಿಕೆ ಅಥವಾ ಸಂಕೀರ್ಣ ಲವಣವೊಂದರಲ್ಲಿ ಕೇಂದ್ರ ಪರಮಾಣುವಿಗೆ ಬಂಧಿಸಿಕೊಂಡಿರುವ ಪರಮಾಣುಗಳ ನಿರ್ಬಂಧಿಸುವಿಕೆಯ ಮೇಲೆ ಆಧಾರಿತವಾದ ರೋಗದ ಚಿಕಿತ್ಸೆಯೂ ಕೂಡ ಔಷಧ ಶಾಸ್ತ್ರದ (ಔಷಧ ವಿಜ್ಞಾನ) ಇತರ ವಿಭಾಗಗಳಂತೆ ಸಂಪೂರ್ಣಗೊಳ್ಳಲ್ಪಡುತ್ತದೆ. ಆದಾಗ್ಯೂ, ವಿಕಿರಣ ಔಷಧ ವಸ್ತುಗಳು ಸಣ್ಣ-ವ್ಯಾಪ್ತಿಯ ಅಯಾನೀಕರಣ ವಿಕಿರಣದ ಅಂಗಾಂಶ-ವಿನಾಶಕಾರಿ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ವಿಭಾಗದ ವಿವರಣೆ
[ಬದಲಾಯಿಸಿ]ಅಣು ವೈದ್ಯಶಾಸ್ತ್ರ ಚಿತ್ರಣದಲ್ಲಿ, ವಿಕಿರಣ ಔಷಧವಸ್ತುಗಳು ಆಂತರಿಕವಾಗಿ ತೆಗೆದುಕೊಳ್ಳಲ್ಪಡುತ್ತವೆ, ಉದಾಹರಣೆಗೆ ರಕ್ತನಾಳಕ್ಕೆ ಇದನ್ನು ಚುಚ್ಚುವ ಮೂಲಕ ಅಥವಾ ಬಾಯಿಯ ಮೂಲಕ ತೆಗೆದುಕೊಳ್ಳಲ್ಪಡುತ್ತವೆ. ನಂತರ, ಬಾಹ್ಯ ಸಂಶೋಧಕಗಳು (ಗ್ಯಾಮಾ ಕ್ಯಾಮೆರಾಗಳು) ಚಿತ್ರಣವನ್ನು ಸೆರೆಹಿಡಿಯುತ್ತವೆ ಮತ್ತು ವಿಕಿರಣ ಔಷಧವಸ್ತುಗಳ ಮೂಲಕ ಹೊರಸೂಸಲ್ಪಟ್ಟ ವಿಕಿರಣದಿಂದ ಚಿತ್ರಣಗಳನ್ನು ನಿರ್ಮಿಸುತ್ತದೆ. ಈ ಪ್ರಕ್ರಿಯೆಯು ಒಂದು ಚಿತ್ರಣವನ್ನು ನಿರ್ಮಿಸುವುದಕ್ಕಾಗಿ ಬಾಹ್ಯ ವಿಕಿರಣವು ದೇಹದ ಒಳಗೆ ಸಾಗುವ ಒಂದು ವಿಶ್ಲೇಷಣಾತ್ಮಕ (ರೋಗನಿರ್ಣಯಾತ್ಮಕ)ಎಕ್ಸ್-ರೇ (ಕ್ಷ-ಕಿರಣ)ಯಂತೆ ಇರುವುದಿಲ್ಲ. ರೋಗನಿರ್ಣಯ ಅಣು ವೈದ್ಯಶಾಸ್ತ್ರದಲ್ಲಿ ಹಲವಾರು ಕಾರ್ಯವಿಧಾನಗಳಿವೆ. ಸ್ಫುರಣರೇಖನ ("ಸ್ಕಿಂಟ್") ಇದು ಎರಡು ಆಯಾಮದ ಚಿತ್ರಣವನ್ನು ನಿರ್ಮಿಸುವ ಸಲುವಾಗಿ[೧] ಆಂತರಿಕ ವಿಕಿರಣ ನ್ಯೂಕ್ಲೈಡ್ಗಳನ್ನು ಬಳಸಿಕೊಳ್ಳುವ ಕ್ರಿಯೆಯಾಗಿದೆ. ಸ್ಪೆಕ್ಟ್ (SPECT) ಇದು ಒಂದು 3D ತಲಲೇಖಿಕ ತಂತ್ರಗಾರಿಕೆಯಾಗಿದೆ. ಅದು ಹಲವಾರು ಕ್ಷೇಪಣದಿಂದ ಗ್ಯಾಮಾ ಕ್ಯಾಮೆರಾವನ್ನು ಬಳಸುತ್ತದೆ ಮತ್ತು ವಿಭಿನ್ನವಾದ ವಿಮಾನಗಳಲ್ಲಿ ಪುನರ್ನಿರ್ಮಾಣ ಮಾಡಲ್ಪಡುತ್ತದೆ. ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪಿಇಟಿ) ಇದು ಕಾರ್ಯಾತ್ಮಕ ಪ್ರಕ್ರಿಯೆಗಳನ್ನು ಕಂಡುಹಿಡಿಯುವುದಕ್ಕೆ ಅಂದಾಜುಗಣನೆಯನ್ನು ಬಳಸುತ್ತದೆ. ಅಣು ವೈದ್ಯಶಾಸ್ತ್ರ ಪರೀಕ್ಷೆಗಳು ಹೆಚ್ಚಿನ ಇತರ ಚಿತ್ರಣ ವಿಧಾನಗಳಿಂದ ಭಿನ್ನವಾಗಿರುತ್ತದೆ. ಅದರಲ್ಲಿ ರೋಗನಿರ್ಣಯಾತ್ಮಕ ಪರೀಕ್ಷೆಗಳು ಪ್ರಾಥಮಿಕವಾಗಿ ಸಿಟಿ ಅಥವಾ ಎಮ್ಆರ್ಐಗಳಂತೆ ಸಾಂಪ್ರದಾಯಿಕ ಅಂಗರಚನಾಶಾಸ್ತ್ರದ ಚಿತ್ರಣಕ್ಕೆ ವಿರುದ್ಧವಾಗಿ ಸಂಶೋಧಿಸಲ್ಪಟ್ಟ ವ್ಯವಸ್ಥೆಯ ಶರೀರ ವೈಜ್ಞಾನಿಕ ಕಾರ್ಯಗಳನ್ನು ತೋರಿಸುತ್ತವೆ. ಅಣು ವೈದ್ಯಶಾಸ್ತ್ರ ಚಿತ್ರಣದ ಅಧ್ಯಯನಗಳು ದೇಹದ ನಿರ್ದಿಷ್ಟ ಭಾಗದ ಮೇಲೆ ಗಮನವನ್ನು ಕೇಂದ್ರೀಕರಿಸುವ (ಅಂದರೆ, ಎದೆಯ ಎಕ್ಸ್-ರೇ, ಕಿಬ್ಬೊಟ್ಟೆ/ಶ್ರೋಣಿ ಕುಹರ ಸಿಟಿ ವಿಶ್ಲೇಷಣೆ, ತಲೆಯ ಸಿಟಿ ವಿಶ್ಲೇಷಣೆ ಇತ್ಯಾದಿ) ಸಾಂಪ್ರದಾಯಿಕ ವಿಕಿರಣಶೀಲ ಚಿತ್ರಣದಂತೆ ಅಲ್ಲದೇ ಸಾಮಾನ್ಯವಾಗಿ ಹೆಚ್ಚು ಅಂಗಗಳು ಅಥವಾ ಅಂಗಾಂಶ ನಿರ್ದಿಷ್ಟವಾಗಿರುತ್ತವೆ (ಉದಾಹರಣೆಗೆ ಶ್ವಾಸಕೋಶದ ವಿಶ್ಲೇಷಣೆ, ಹೃದಯದ ವಿಶ್ಲೇಷಣೆ, ಮೂಳೆಯ ವಿಶ್ಲೇಷಣೆ, ಮೆದುಳಿನ ವಿಶ್ಲೇಷಣೆ ಇತ್ಯಾದಿ). ಹೆಚ್ಚುವರಿಯಾಗಿ, ಅಲ್ಲಿ ನಿರ್ದಿಷ್ಟ ಕೋಶೀಯ ಗ್ರಾಹಕಗಳು ಅಥವಾ ಕಾರ್ಯಗಳ ಮೇಲೆ ಆಧರಿತವಾದ ಪೂರ್ತಿ ದೇಹದ ಚಿತ್ರಣಕ್ಕೆ ಅನುಮತಿಯನ್ನು ನೀಡುವ ಅಣು ವೈದ್ಯಶಾಸ್ತ್ರ ಅಧ್ಯಯನಗಳು ಕೂಡ ಇವೆ. ಉದಾಹರಣೆಗಳೆಂದರೆ ಪೂರ್ತಿ ದೇಹದ ಪಿಇಟಿ ಸ್ಕ್ಯಾನ್ (ವಿಶ್ಲೇಷಣೆ) ಅಥವಾ ಪಿಇಟಿ/ಸಿಟಿ ವಿಶ್ಲೇಷಣೆಗಳು, ಗ್ಯಾಲಿಯಮ್ ವಿಶ್ಲೇಷಣೆಗಳು, ಇಂಡಿಯಮ್ ಬಿಳಿ ರಕ್ತಕಣ ವಿಶ್ಲೇಷಣೆಗಳು, ಎಮ್ಐಬಿಜಿ ಮತ್ತು ಒಕ್ಟ್ರೆಯೋಟೈಡ್ ವಿಶ್ಲೇಷಣೆಗಳು. ಚಯಾಪಚಯದಲ್ಲಿ ಭಿನ್ನತೆಗಳಿಂದ ರೋಗದ ಚಿತ್ರಣ ಪ್ರಕ್ರಿಯೆಗೆ ನ್ಯೂಕ್ಲಿಯರ್ ಚಯಾಪಚಯ ಸಾಮರ್ಥ್ಯವು ಮೀರಸಲ್ಪಡದಿದ್ದ ಸಂದರ್ಭದಲ್ಲಿ ಇದು ಉತ್ಕೃಷ್ಟವಾಗಿರುವುದಿಲ್ಲ. ರಕ್ತದ ಹರಿವಿನ ಮೂಲಕ ಎಫ್ಎಮ್ಅರ್ಐ ಚಿತ್ರಣದಂತಹ (ನಿರ್ದಿಷ್ಟವಾಗಿ ಕಿರುಮೆದುಳಿನ ಅಂಗಾಂಶಗಳು) ನಿರ್ದಿಷ್ಟ ಕಾರ್ಯವಿಧಾನಗಳು ಅಂಗಾಂಶಗಳ ಚಿತ್ರನವನ್ನು ನೀಡುತ್ತವೆ, ಮತ್ತು ಆದ್ದರಿಂದ ಚಯಾಪಚಯವನ್ನು ಪ್ರದರ್ಶಿಸುತ್ತವೆ. ಹಾಗೆಯೇ, ಸಿಟಿ ಮತ್ತು ಎಮ್ಆರ್ಐ ಈ ಎರಡರಲ್ಲಿಯೂ ವೈದೃಶ್ಯ-ವರ್ಧನೆಯ ಕಾರ್ಯವಿಧಾನಗಳು ಒಂದು ಪ್ರಚೋದಕ ಪ್ರಕ್ರಿಯೆಯ ಕಾರಣದಿಂದಾಗಿ ಔಷಧೀಯ ವಸ್ತುಗಳನ್ನು ವಿಭಿನ್ನವಾಗಿ ನಿರ್ವಹಿಸುವ ಅಂಗಾಂಶಗಳನ್ನು ತೋರಿಸುತ್ತವೆ. ಯಾವಾಗ ರೋಗ ಅಥವಾ ರೋಗಕಾರಕಗಳು ಅಸ್ತಿತ್ವದಲ್ಲಿರುತ್ತವೆಯೋ ಆಗ ಅಣು ವೈದ್ಯಶಾಸ್ತ್ರದಲ್ಲಿ ವಿಶ್ಲೇಷಣಾತ್ಮಕ ಪರೀಕ್ಷೆಗಳು ದೇಹವು ದ್ರವ್ಯಗಳನ್ನು ವಿಭಿನ್ನವಾಗಿ ನಿಯಂತ್ರಿಸುವ ಮಾರ್ಗವನ್ನು ಪರಿಶೋಧಿಸುತ್ತವೆ. ದೇಹದೊಳಕ್ಕೆ ಸೇರಿಸಲ್ಪಟ್ಟ ವಿಕಿರಣ ನ್ಯೂಕ್ಲೈಡ್ ಅನೇಕ ವೇಳೆ ಒಂದು ಮಿಶ್ರಣಕ್ಕೆ ರಾಸಾಯನಿಕವಾಗಿ ನಿರ್ಬಂಧಿತವಾಗಿರುತ್ತದೆ ಅದು ದೇಹದೊಳಗೆ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತದೆ. ರೋಗವು ಅಸ್ತಿತ್ವದಲ್ಲಿರುವ ಸಮಯದಲ್ಲಿ, ಒಂದು ಸಂಶೊಧಕವು ಅನೇಕ ವೇಳೆ ದೇಹದೆಲ್ಲೆಡೆ ಹಂಚಲ್ಪಡುತ್ತದೆ ಮತ್ತು/ಅಥವಾ ವಿಭಿನ್ನವಾಗಿ ಸಂಸ್ಕರಿಸಲ್ಪಡುತ್ತದೆ. ಉದಾಹರಣೆಗೆ, ಲಿಗಂಡ್ ಮೀಥೈಲಿನ್-ಡೈಫೊಸ್ಪೊನೇಟ್ (ಎಮ್ಡಿಪಿ) ಮೂಳೆಯಿಂದ ಹೆಚ್ಚಿನ ಆದ್ಯತೆ ಕೊಟ್ಟು ತೆಗೆದುಕೊಳ್ಳಲ್ಪಡುತ್ತದೆ. ಎಮ್ಡಿಪಿಗೆ ಟೆಕ್ನಿಯಮ್-99ಎಮ್ ಅನ್ನು ರಾಸಾಯನಿಕವಾಗಿ ಸಂಯೋಜಿಸುವಾಗ, ವಿಕಿರಣ ಕಾರ್ಯಚಟುವಟಿಕೆಯು ಸಂವಹಿಸಲ್ಪಡುತ್ತದೆ ಮತ್ತು ಚಿತ್ರಣಕ್ಕಾಗಿ ಹೈಡ್ರೋಕ್ಯಾಪಟೈಟ್ ಮೂಲಕ ಮೂಳೆಗೆ ಸಂಯೋಜಿಸಲ್ಪಡುತ್ತದೆ. ಯಾವುದೇ ವರ್ಧಿಸಲ್ಪಟ್ಟ ಶರೀರವೈಜ್ಞಾನಿಕ ಕ್ರಿಯೆಯು, ಅಂದರೆ ಮೂಳೆಯಲ್ಲಿನ ಮುರಿತದಂತಹ ಕ್ರಿಯೆಯು ಸಾಮಾನ್ಯವಾಗಿ ಸಂಶೋಧಕದ ಹೆಚ್ಚಿನ ಕೇಂದ್ರೀಕರಣವನ್ನು ಹೊಂದಿರುತ್ತದೆ. ಇದು ಅನೇಕ ವೇಳೆ ’ಹಾಟ್-ಸ್ಪಾಟ್’ನ (’ಬಿಸಿ-ಭಾಗ’) ಗೋಚರಿಕೆಗೆ ಕಾರಣವಾಗುತ್ತದೆ, ಅದು ವಿಕಿರಣ-ಸಂಗ್ರಹಣೆಯಲ್ಲಿನ ಒಂದು ನಾಭಿಕೇಂದ್ರಿತ ಹೆಚ್ಚಳವಾಗಿದೆ, ಅಥವಾ ಶರೀರ ವೈಜ್ಞಾನಿಕ ವ್ಯವಸ್ಥೆಯಲ್ಲಿನ ವಿಕಿರಣ-ಸಂಗ್ರಹಣೆಯ ಒಂದು ಸಾಮಾನ್ಯ ಹೆಚ್ಚಳವಾಗಿದೆ. ಕೆಲವು ರೋಗದ ಪ್ರಕ್ರಿಯೆಗಳು ಒಂದು ಸಂಶೋಧಕದ ಬಹಿಷ್ಕರಣಕ್ಕೆ ಕಾರಣವಾಗುತ್ತದೆ, ಅದು ಒಂದು ’ಶೀತ-ಭಾಗ’ದ ಗೋಚರಿಕೆಗೆ ಕಾರಣವಾಗುತ್ತದೆ. ಹಲವಾರು ವಿಭಿನ್ನ ಅಂಗಗಳು, ಗ್ರಂಧಿಗಳು, ಮತ್ತು ಶರೀರ ವೈಜ್ಞಾನಿಕ ಪ್ರಕ್ರಿಯೆಗಳನ್ನು ಚಿತ್ರಿಸುವುದಕ್ಕೆ ಅಥವಾ ಅವುಗಳಿಗೆ ಚಿಕಿತ್ಸೆ ಮಾಡುವುದಕ್ಕೆ ಹಲವಾರು ಸಂಶೋಧಕ ಮಿಶ್ರಣಗಳು ಅಭಿವೃದ್ಧಿಗೊಳಿಸಲ್ಪಟ್ಟಿವೆ.
ಉತ್ಕೃಷ್ಟವಾದ ವಿಶ್ಲೇಷಣಾ ತಂತ್ರಗಾರಿಕೆಗಳು (ಕಾರ್ಯವಿಧಾನಗಳು)
[ಬದಲಾಯಿಸಿ]ಕೆಲವು ಕೇಂದ್ರಗಳಲ್ಲಿ, ಅಣು ವೈದ್ಯಶಾಸ್ತ್ರ ವಿಶ್ಲೇಷಣೆಗಳು, ವಿಕಿರಣ ಔಷಧಿಗಳು ಕೇಂದ್ರೀಕೃತವಾಗಿರುವ ದೇಹದ ಭಾಗವನ್ನು ಗುರುತಿಸುವ ಸಲುವಾಗಿ ಸಿಟಿ ಅಥವಾ ಎಮ್ಆರ್ಐಗಳಂತಹ ವಿಧಾನಗಳಿಂದ ಚಿತ್ರಣಗಳ ಮೇಲೆ ಸಾಫ್ಟ್ವೇರ್ ಅಥವಾ ಉತ್ಕೃಷ್ಟವಾದ ಕ್ಯಾಮರಾಗಳನ್ನು ಬಳಸಿಕೊಂಡು ಅಧ್ಯಾರೋಪಿಸಲ್ಪಡುತ್ತವೆ (ಒಂದರ ಮೇಲೆ ಒಂದು ಇಡಲ್ಪಡುತ್ತವೆ). ಈ ಪದ್ಧತಿಯು ಅನೇಕ ವೇಳೆ ಚಿತ್ರಣ ಸಮ್ಮಿಳನ ಅಥವಾ ಸಹ-ಸಂಯೋಜನ ಎಂಬುದಾಗಿ ಕರೆಯಲ್ಪಡುತ್ತದೆ, ಉದಾಹರಣೆಗೆ ಸ್ಪೆಕ್ಟ್/ಸಿಟಿ ಮತ್ತು ಪಿಇಟಿ/ಸಿಟಿ. ಅಣು ವೈದ್ಯಶಾಸ್ತ್ರದಲ್ಲಿ ಸಮ್ಮಿಳನ ಚಿತ್ರಣ ತಂತ್ರಗಾರಿಕೆಯು ಅಂಗರಚನಾಶಾಸ್ತ್ರ ಮತ್ತು ಕಾರ್ಯಗಳ ಬಗೆಗೆ ಮಾಹಿತಿಯನ್ನು ನೀಡುತ್ತದೆ, ಅದು ಇದರ ಹೊರತಾಗಿ ದೊರೆಯುವುದಿಲ್ಲ, ಅಥವಾ ಈ ಮಾಹಿತಿಯನ್ನು ಪಡೆಯುವುದಕ್ಕೆ ಹೆಚ್ಚು ಪ್ರಚೋದಕವಾದ ಕಾರ್ಯವಿಧಾನ ಅಥವಾ ಶಸ್ತ್ರಚಿಕಿತ್ಸೆಯು ಅವಶ್ಯಕವಾಗುತ್ತದೆ.
ನ್ಯೂಕ್ಲಿಯರ್ ಚಿತ್ರಣದಲ್ಲಿ ಪ್ರಾಯೋಗಿಕ ಕಾಳಜಿಗಳು
[ಬದಲಾಯಿಸಿ]ವಿಶ್ಲೇಷಣಾತ್ಮಕ ಅಣು ವೈದ್ಯಶಾಸ್ತ್ರ ಕಾರ್ಯವಿಧಾನಗಳಿಂದ ಬಿಡುಗಡೆಯಾಗುವ ವಿಕಿರಣದ ಪ್ರಮಾಣವು ಒಂದು ಸುರಕ್ಷಿತ ಪರಿಮಿತಿಯೊಳಗೆ ಇರಿಸಲ್ಪಡುತ್ತದೆ ಮತ್ತು "ಎಎಲ್ಎಆರ್ಎ" (ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಸಾಮಾನ್ಯವಾಗಿ ಸಾಧಿಸಬಲ್ಲ) ಸೂತ್ರವನ್ನು ಅನುಸರಿಸುತ್ತದೆ. ಅಣು ವೈದ್ಯಶಾಸ್ತ್ರ ಚಿತ್ರಣದಿಂದ ತೆಗೆದುಕೊಳ್ಳಲ್ಪಟ್ಟ ವಿಕಿರಣದ ಪ್ರಮಾಣವು ಅಧ್ಯಯನದ ವಿಧದ ಮೇಲೆ ಅವಲಂಬಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಬದಲಾಗುತ್ತದೆ. ಪರಿಣಾಮಕಾರಿಯಾದ ವಿಕಿರಣ ಪ್ರಮಾಣವು ವಾರ್ಷಿಕ ಹಿನ್ನೆಲೆಯ ವಿಕಿರಣ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ ಅಥವಾ ಅದಕ್ಕೆ ಹೋಲಿಸಿ ನೋಡುವಂತದ್ದಾಗಿರುತ್ತದೆ. ಒಂದು ಕಿಬ್ಬೊಟ್ಟೆಯ/ಶ್ರೋಣಿಕುಹರದ ಸಿಟಿ ವಿಶ್ಲೇಷಣೆಯಿಂದ ತೆಗೆದುಕೊಳ್ಳಲ್ಪಟ್ಟ ವಿಕಿರಣ ಪ್ರಮಾಣದ ವ್ಯಾಪ್ತಿಯಲ್ಲಿರುತ್ತದೆ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಕೆಲವು ಅಣು ವೈದ್ಯಶಾಸ್ತ್ರ ಕಾರ್ಯವಿಧಾನಗಳು ಹೆಚ್ಚು ನಿಖರವಾದ ಫಲಿತಾಂಶವನ್ನು ಪಡೆಯುವುದಕ್ಕೆ ಮುಂಚೆ ರೋಗಿಯ ವಿಶಿಷ್ಟವಾದ ತಯಾರಿಯು ಅವಶ್ಯಕವಾಗಿರುತ್ತದೆ. ಚಿತ್ರಣಕ್ಕೂ-ಮುಂಚಿನ ತಯಾರಿಗಳು ಪಥ್ಯಕ್ರಮದ ತಯಾರಿಗಳು ಅಥವಾ ಕೆಲವು ನಿರ್ದಿಷ್ಟ ಔಷಧಿಗಳ ಸೇವನೆಯನ್ನು ನಿಲ್ಲಿಸುವಿಕೆಯನ್ನು ಒಳಗೊಳುತ್ತದೆ. ರೋಗಿಗಳು ವಿಶ್ಲೇಷಣೆಗಿಂತ ಮುಂಚೆ ಅಣು ವೈದ್ಯಶಾಸ್ತ್ರ ವಿಭಾಗದೊಂದಿಗೆ ಸಮಾಲೋಚಿಸುವುದಕ್ಕೆ ಉತ್ತೇಜಿಸಲ್ಪಡುತ್ತಾರೆ.
ಅಣು ವೈದ್ಯಶಾಸ್ತ್ರ ಚಿಕಿತ್ಸೆ
[ಬದಲಾಯಿಸಿ]ಅಣು ವೈದ್ಯಶಾಸ್ತ್ರ ಚಿಕಿತ್ಸೆಯಲ್ಲಿ, ವಿಕಿರಣ ಚಿಕಿತ್ಸೆಯ ಪ್ರಮಾಣವು ಒಂದು ಬಾಹ್ಯ ವಿಕಿರಣ ಮೂಲಕ್ಕೆ ಬದಲಾಗಿ ಆಂತರಿಕವಾಗಿ (ಅಂದರೆ ಅಂತರಭಿದಮನಿಯ ಅಥವಾ ಬಾಯಿಯ ಮೂಲಕ) ನಿಯಂತ್ರಿಸಲ್ಪಡುತ್ತದೆ. ಅಣು ವೈದ್ಯಶಾಸ್ತ್ರ ಚಿಕಿತ್ಸೆಯಲ್ಲಿ ಬಳಸಲ್ಪಟ್ಟ ವಿಕಿರಣ ಔಷಧವಸ್ತುಗಳು ಕೇವಲ ಸ್ವಲ್ಪ ದೂರಕ್ಕೆ ಮತ್ರ ಚಲಿಸಬಲ್ಲ ಅಯಾನೀಕರಣಗೊಳಿಸುವ ವಿಕಿರಣವನ್ನು ಹೊರಸೂಸುತ್ತವೆ. ಆ ಮೂಲಕ ಅಸಮಂಜಸವಾದ ಅಡ್ಡ ಪರಿಣಾಮಗಳನ್ನು ಮತ್ತು ಅದಕ್ಕೆ ಸಂಬಂಧಿಸಿಲ್ಲದ ಅಂಗಗಳಿಗೆ ಅಥವಾ ಸನಿಹದಲ್ಲಿರುವ ಭಾಗಗಳಿಗೆ ಉಂಟಾಗುವ ಹಾನಿಯನ್ನು ಕನಿಷ್ಠಗೊಳಿಸುತ್ತದೆ. ಹೆಚ್ಚಿನ ಅಣು ವೈದ್ಯಶಾಸ್ತ್ರ ಚಿಕಿತ್ಸೆಗಳು ಬಾಹ್ಯ ರೋಗಿಗಳ ಕಾರ್ಯವಿಧಾನವಾಗಿ ನಿರ್ವಹಿಸಲ್ಪಡುತ್ತವೆ ಏಕೆಂದರೆ ಆ ಚಿಕಿತ್ಸೆಯಲ್ಲಿ ಕೆಲವೇ ಕೆಲವು ಅಡ್ಡ ಪರಿಣಾಮಗಳಿರುತ್ತವೆ ಮತ್ತು ಸಾರ್ವಜನಿಕರಿಗೆ ವಿಕಿರಣಕ್ಕೆ ತೆರೆದುಕೊಳ್ಳುವಿಕೆಯು ಒಂದು ಸುರಕ್ಷಿತ ಮಿತಿಯೊಳಗೆ ಇರಿಸಿಕೊಂಡಿರಲಾಗಿರುತ್ತದೆ. ಸಾಮಾನ್ಯ ಅಣು ವೈದ್ಯಶಾಸ್ತ್ರ ಚಿಕಿತ್ಸೆಗಳು ಹೈಪರ್ಥೈರಾಯ್ಡಿಸಮ್ ಮತ್ತು ಥೈರಾಯ್ಡ್ ಕ್ಯಾನ್ಸರ್, ವೈಟ್ರಿಯಮ್-90-ಇಬ್ರಿಟುಮೋಮ್ಯಾಬ್ ಟಿಯುಕ್ಸೆಟನ್ (ಜೆವಾಲಿನ್) ಮತ್ತು ಚಿಕಿತ್ಸೆಗೆ ಜಗ್ಗದ ಲೈಂಫೋಮಾಗೆ ಅಯೋಡಿನ್-131-ಟೋಸಿಟುಮೋಮ್ಯಾಬ್ (ಬೆಕ್ಸಾರ್), ನ್ಯೂರೋಎಂಡೋಕ್ರಿನ್ ಟ್ಯೂಮರ್ಗಳಿಗೆ 131ಐ-ಎಮ್ಐಬಿಜಿ (ಮೆಟಾಅಯೋಡೋಬೆಂಜಿಲ್ಗುವಾಐಡಿನ್), ಮತ್ತು ಸಮಾರಿಯಮ್-153 ಅಥವಾ ಸ್ಟ್ರಾಂಟಿಯಮ್-89 ಜೊತೆಗಿನ ಮೂಳೆಯ ನೋವಿನ ಉಪಶಾಮಕ ಚಿಕಿತ್ಸೆಗಳಿಗೆ 131I-ಸೋಡಿಯಮ್ ಅನ್ನು ಒಳಗೊಳ್ಳುತ್ತವೆ. ಕೆಲವು ಕೇಂದ್ರಗಳಲ್ಲಿ ಅಣು ವೈದ್ಯಶಾಸ್ತ್ರ ವಿಭಾಗವು ಕ್ಯಾನ್ಸರ್ಗೆ ಚಿಕಿತ್ಸೆಯನ್ನು ನೀಡುವುದಕ್ಕೆ ಐಸೋಟೋಪ್ಗಳ (ಬ್ರಾಂಚಿಥೆರಪಿ, ಶಾಖಾಚಿಕಿತ್ಸೆ) ಅಂತರ್ನಿವೇಶನ ಗುಳಿಗೆಗಳನ್ನೂ ಕೂಡ ಬಳಸುತ್ತವೆ. ಅಣು ವೈದ್ಯಶಾಸ್ತ್ರ ಚಿಕಿತ್ಸೆಗಳಲ್ಲಿ ಒಂದು ಚಿಕಿತ್ಸೆಗೆ ಮುನ್ನ ರೋಗಿಯ ಕ್ರಮಬದ್ಧವಾದ ತಯಾರಿಯೂ ಕೂಡ ಅವಶ್ಯಕವಾಗಿರುತ್ತದೆ. ಆದ್ದರಿಂದ, ಚಿಕಿತ್ಸೆಗೂ ಮುನ್ನ ಅಣು ವೈದ್ಯಶಾಸ್ತ್ರ ವಿಭಾಗದ ಜೊತೆಗಿನ ಸಮಾಲೋಚನೆಯನ್ನು ಶಿಫಾರಸು ಮಾಡಲಾಗುತ್ತದೆ.
ಪರಮಾಣು ವೈದ್ಯಶಾಸ್ತ್ರ
[ಬದಲಾಯಿಸಿ]ಭವಿಷ್ಯದಲ್ಲಿ, ಅಣು ವೈದ್ಯಶಾಸ್ತ್ರವು ಪರಮಾಣು ವೈದ್ಯಶಾಸ್ತ್ರ ಎಂಬುದಾಗಿ ಕರೆಯಲ್ಪಡುತ್ತದೆ. ಜೀವಿಗಳಲ್ಲಿನ ಕೋಶಗಳ ಜೈವಿಕ ಕ್ರಿಯೆಗಳು ವಿಸ್ತರಿಸುತ್ತ ಹೋಗುತ್ತವೆ ಎಂಬ ನಮ್ಮ ಅರಿವಿನ ಪ್ರಕಾರ, ಕೋಶೀಯ ಮತ್ತು ಉಪಕೋಶೀಯ ಹಂತಗಳಲ್ಲಿನ ಜೈವಿಕ ಪ್ರಕ್ರಿಯೆಗಳಲ್ಲಿ ಗೋಚರಿಕೆ, ಗುಣಲಕ್ಷಣ, ಮತ್ತು ಪರಿಮಾಣ ಮಾಪನಗಳನ್ನು ಅನುಮತಿಸುವ ಸಲುವಾಗಿ ನಿರ್ಧಿಷ್ಟ ಶೋಧಕಗಳು ಅಭಿವೃದ್ಧಿಗೊಳಿಸಲ್ಪಡಬಹುದು.[೨] ಅಣು ವೈದ್ಯಶಾಸ್ತ್ರವು ತನ್ನ ಕಾರ್ಯಗಳ ಮೇಲಿನ ಪ್ರಾಶಸ್ತ್ಯತೆ ಮತ್ತು ಒಂದು ನಿರ್ದಿಷ್ಟ ರೋಗದ ಪ್ರಕ್ರಿಯೆಗೆ ನಿಖರವಾಗಿರುವ ಚಿತ್ರಣ ಘಟಕಗಳ ಬಳಕೆಯ ಕಾರಣದಿಂದಾಗಿ ಪರಮಾಣು ವೈದ್ಯಶಾಸ್ತ್ರದ ಬೋಧನಾ ಶಾಖೆಯನ್ನು ಅಳವಡಿಸಿಕೊಳ್ಳುವ ಒಂದು ನಿರ್ಧಿಷ್ಟ ಮಾದರಿಯ ವಿಭಾಗವಾಗಿದೆ.
ಇತಿಹಾಸ
[ಬದಲಾಯಿಸಿ]ಅಣು ವೈದ್ಯಶಾಸ್ತ್ರದ ಇತಿಹಾಸವು ವಿಭಿನ್ನ ವಿಭಾಗಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಎಂಜಿನಿಯರಿಂಗ್, ಮತ್ತು ವೈದ್ಯಕಿಯಶಾಸ್ತ್ರದಲ್ಲಿನ ಪ್ರಮುಖ ವಿಜ್ಞಾನಿಗಳಿಂದ ಪಡೆದುಕೊಂಡ ಕೊಡುಗೆಗಳ ಜೊತೆಗೆ ಶ್ರೀಮಂತವಾಗಿದೆ. ಅಣು ವೈದ್ಯಶಾಸ್ತ್ರದ ಬಹುವಿಭಾಗದ ಸ್ವಭಾವವು ವೈದ್ಯಕೀಯ ಇತಿಹಾಸಗಾರರಿಗೆ ಅಣು ವೈದ್ಯಶಾಸ್ತ್ರದ ಉಗಮವನ್ನು ಗುರುತಿಸುವುದಕ್ಕೆ ಕಷ್ಟವಾಗುವಂತೆ ಮಾಡುತ್ತದೆ. ಇದು ಸಂಭಾವ್ಯವಾಗಿ 1934 ರಲ್ಲಿನ ಕೃತಕ ವಿಕಿರಣ ಕ್ರಿಯೆಗಳ ಸಂಶೋಧನೆ ಮತ್ತು 1946 ರಲ್ಲಿ ಓಕ್ ರಿಜ್ ರಾಷ್ಟ್ರೀಯ ಪ್ರಯೋಗಾಲಯದಿಂದ ವೈದ್ಯಕೀಯಕ್ಕೆ ಸಂಬಂಧಿಸಿದ ಬಳಕೆಗೆ ವಿಕಿರಣ ನ್ಯೂಕ್ಲೈಡ್ಗಳ ಉತ್ಪಾದನೆ ಈ ಎರಡರ ನಡುವೆ ಉಗಮವಾಗಿದೆ ಎಂಬುದಾಗಿ ತಿಳಿಯಲ್ಪಡುತ್ತದೆ.[೩]
ಫ್ರೆಡ್ರಿಕ್ ಜೋಲಿಯಟ್-ಕ್ಯೂರಿ ಮತ್ತು ಐರೆನ್ ಜೋಲಿಯಟ್-ಕ್ಯೂರಿ ಇವರುಗಳಿಂದ 1934 ರಲ್ಲಿ ಕೃತಕವಾಗಿ ಉತ್ಪಾದಿಸಲ್ಪಟ್ಟ ವಿಕಿರಣ ನ್ಯೂಕ್ಲೈಡ್ಗಳ ಸಂಶೋಧನೆಯು ಅಣು ವೈದ್ಯಶಾಸ್ತ್ರದಲ್ಲಿನ ಅತ್ಯಂತ ಮಹತ್ವದ ಮೈಲಿಗಲ್ಲು ಎಂಬುದಾಗಿ ಹಲವಾರು ಇತಿಹಾಸಕಾರರು ಪರಿಗಣಿಸುತ್ತಾರೆ.[೩] ಫೆಬ್ರವರಿ 1934 ರಲ್ಲಿ, ಅಲ್ಯುಮಿಯಮ್ ಹಾಳೆಯಲ್ಲಿ ಒಂದು ಪೊಲೋನಿಯಮ್ ತಯಾರಿಕೆಯ ಜೊತೆಗೆ ವಿಕಿರಣಿಸಲ್ಪಟ್ಟ ವಿಕಿರಣಶೀಲವನ್ನು ಸಂಶೋಧಿಸಿದ ನಂತರ ಅವರುಗಳು ನೇಚರ್ ನಿಯತಕಾಲಿಕದಲ್ಲಿ ವಿಕಿರಣಶೀಲ ಭೌತಿಕ ವಸ್ತುವಿನ ಮೊದಲ ಕೃತಕ ಉತ್ಪಾದನೆಯನ್ನು ವರದಿ ಮಾಡಿದರು. ಅವರ ಕಾರ್ಯಗಳು ಎಕ್ಸ್-ರೇ ಯ ಮೇಲೆ ಕಾರ್ಯನಿರ್ವಹಿಸಿದ ವಿಲ್ಹೆಮ್ ಕೋನಾರ್ಡ್ ರೋಯೆಂಟ್ಗನ್, ವಿಕಿರಣಶೀಲ ಯುರೇನಿಯಮ್ ಲವಣಗಳ ಮೇಲೆ ಕಾರ್ಯನಿರ್ವಹಿಸಿದ ಹೆನ್ರಿ ಬೆಕ್ವೆರೆಲ್, ಮತ್ತು ವಿಕಿರಣಶೀಲಥೋರಿಯಮ್, ಪೊಲೊನಿಯಮ್ ಮತ್ತು "ವಿಕಿರಣಶೀಲ" ಎಂಬ ಶಬ್ದವನ್ನು ಸಂಯೋಜಿಸಿದ ಮೇರಿ ಕ್ಯೂರಿ (ಐರೆನ್ ಕ್ಯೂರಿಯ ತಾಯಿ) ಇವರುಗಳ ಮುಂಚಿನ ಸಂಶೋಧನೆಗಳ ಮೇಲೆ ನಿರ್ಮಿಸಲ್ಪಟ್ಟಿದ್ದವು. ಟಾರೋ ಟಾಕೆಮಿಯು ವೈದ್ಯಶಾಸ್ತ್ರಕ್ಕೆ ನ್ಯೂಕ್ಲಿಯರ್ ಭೌತಶಾಸ್ತ್ರವನ್ನು 1930ರ ದಶಕದಲ್ಲಿ ಅಧ್ಯಯನ ಮಾಡಿದರು. ಪ್ರಾರಂಭದ ಈ ಸಂಶೋಧನಕಾರರನ್ನು ನಮೂದಿಸದೇ ಹೋದ ಪಕ್ಷದಲ್ಲಿ ಅಣು ವೈದ್ಯಶಾಸ್ತ್ರದ ಇತಿಹಾಸವು ಸಂಪೂರ್ಣವೆನಿಸಿಕೊಳ್ಳುವುದಿಲ್ಲ.
ಸ್ಯಾಮ್ ಸೈಡ್ಲಿನ್ರಿಂದ ಅಮೇರಿಕಾದ ವೈದ್ಯಕೀಯ ಸಂಸ್ಥೆಯಲ್ಲಿ ಒಂದು ಲೇಖನವು 7, 1946 ರಂದು ಪ್ರಕಟಿಸಲ್ಪಟ್ಟ ಸಮಯದಲ್ಲಿ ಅಣು ವೈದ್ಯಶಾಸ್ತ್ರವು ಒಂದು ಸಂಭವನೀಯ ವಿಭಾಗವಾಗಿ ಸಾರ್ವಜನಿಕ ಮನ್ನಣೆಯನ್ನು ಪಡೆದುಕೊಂಡಿತು. ಲೇಖನವು ವಿಕಿರಣ ಅಯೋಡಿನ್ (I-131) ಅನ್ನು ಬಳಸಿಕೊಂಡು ಥೈರಾಯ್ಡ್ ಕ್ಯಾನ್ಸರ್ ಅನ್ನು ಹೊಂದಿರುವ ಒಬ್ಬ ರೋಗಿಯ ಯಶಸ್ವಿ ಚಿಕಿತ್ಸೆಯನ್ನು ವರ್ಣಿಸಿತು. ಇದು ಹಲವಾರು ಇತಿಹಾಸಕಾರರಿಂದ ಅಣು ವೈದ್ಯಶಾಸ್ತ್ರದಲ್ಲಿ ಯಾವತ್ತಿಗೂ ಕೂಡ ಪ್ರಕಟಿಸಲ್ಪಟ್ಟಿರದ ಒಂದು ಪ್ರಮುಖ ಲೇಖನ ಎಂಬುದಾಗಿ ಪರಿಗಣಿಸಲ್ಪಟ್ಟಿತು.[೪] ಆದಾಗ್ಯೂ, I-131ನ ಮುಂಚಿನ ಬಳಕೆಯು ಥೈರಾಯ್ಡ್ ಕ್ಯಾನ್ಸರ್ನ ಚಿಕಿತ್ಸೆಗೆ ಮೀಸಲಿಡಲ್ಪಟ್ಟಿತ್ತು, ಇದರ ಬಳಕೆಯು ನಂತರದಲ್ಲಿ ಥೈರಾಯ್ಡ್ ಗ್ರಂಥಿಯ ಚಿತ್ರಣ, ಥೈರಾಯ್ಡ್ ಕಾರ್ಯದ ಪರಿಮಾಣ ಮಾಪನ, ಮತ್ತು ಹೈಪರ್ ಥೈರಾಯ್ಡಿಸಮ್ಗೆ ಚಿಕಿತ್ಸೆ ಮುಂತಾದವುಗಳನ್ನು ಒಳಗೊಳ್ಳುವುದಕ್ಕೆ ವಿಸ್ತರಿಸಲ್ಪಟ್ಟಿತು.
ಅಣು ವೈದ್ಯಶಾಸ್ತ್ರದ ವ್ಯಾಪಕವಾದ ವೈದ್ಯಕೀಯ ಬಳಕೆಯು 1950 ರ ದಶಕದ ಆದಿಯಲ್ಲಿ ಪ್ರಾರಂಭವಾಯಿತು, ಹಾಗೆಯೇ ಜ್ಞಾನವು ವಿಕಿರಣ ನ್ಯೂಕ್ಲೈಡ್ಗಳು, ವಿಕಿರಣಶೀಲದ ಸಂಶೋಧನೆ, ಮತ್ತು ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಕಂಡುಹಿಡಿಯುವುದಕ್ಕೆ ನಿರ್ದಿಷ್ಟ ವಿಕಿರಣನ್ಯೂಕ್ಲೈಡ್ಗಳ ಬಳಕೆಗೆ ವಿಸ್ತರಿಸಲ್ಪಟ್ಟಿತು. ಮೊದಲ ಸರಳ ರೇಖಾಕೃತಿಯ ವಿಶ್ಲೆಷಕವನ್ನು ಅಭಿವೃದ್ಧಿಗೊಳಿಸುವ ಬೆನಿಡಿಕ್ಟ್ ಕ್ಯಾಸೆನ್ರ ಮುಂಚಿನ ಕಾರ್ಯಗಳು ಮತ್ತು ಹ್ಯಾಲ್ ಒ. ಆಂಗರ್ರ ಸ್ಫುರಣರೇಖನ ಕ್ಯಾಮರಾ (ಆಂಗರ್ ಕ್ಯಾಮರಾ) ಇವುಗಳು ಅಣು ವೈದ್ಯಶಾಸ್ತ್ರದ ಆಗತಾನೇ ಪ್ರಾರಂಭವಾದ ಶಾಖೆಯನ್ನು ಒಂದು ಪೂರ್ತಿ-ಸಜ್ಜುಗೊಳಿಸಲ್ಪಟ್ಟ ವೈದ್ಯಕೀಯ ಚಿತ್ರಣದ ಶಾಖೆಯಾಗಿ ಬದಲಾಯಿಸಿತು.
ಅಣು ವೈದ್ಯಶಾಸ್ತ್ರದ ಈ ವರ್ಷಗಳಲ್ಲಿ ಬೆಳವಣಿಗೆಯು ಅಸಾಧಾರಣವಾಗಿತ್ತು. 1954 ರಲ್ಲಿ ಯುಎಸ್ಎಮ್, ವಾಷಿಂಗ್ಟನ್ನ ಸ್ಪೋಕೇನ್ನಲ್ಲಿ ಸೊಸೈಟಿ ಆಫ್ ನ್ಯೂಕ್ಲಿಯರ್ ಮೆಡಿಸಿನ್ (ನ್ಯೂಕ್ಲಿಯರ್ ವೈದ್ಯಶಾಸ್ತ್ರದ ಸಂಸ್ಥೆ) ಸ್ಥಾಪಿಸಲ್ಪಟ್ಟಿತು. 1960 ರಲ್ಲಿ, ಸಂಸ್ಥೆಯು ಅಣು ವೈದ್ಯಶಾಸ್ತ್ರದ ಒಂದು ನಿಯತಕಾಲಿಕದ ಪ್ರಕಟಣೆಯನ್ನು ಪ್ರಾರಂಭಿಸಿತು, ಅದು ಅಮೇರಿಕಾದಲ್ಲಿ ಈ ಶಾಖೆಯ ಒಂದು ಪ್ರಮುಖ ವೈಜ್ಞಾನಿಕ ನಿಯತಕಾಲಿಕವಾಗಿತ್ತು. ಅಲ್ಲಿ ಚಿತ್ರಣ ಸಾಧನಗಳು ಮತ್ತು ಇನ್-ವಿಟ್ರೋ ಅಧ್ಯಯನಗಳ ಜೊತೆಗೆ ಬಳಸುವ ಸಲುವಾಗಿ ಹೊಸ ವಿಕಿರಣ ನ್ಯೂಕ್ಲೈಡ್ಗಳ ಮತ್ತು ವಿಕಿರಣ ಔಷಧವಸ್ತುಗಳ ಸಂಶೋಧನೆಯ ಪ್ರಾಬಲ್ಯವು ಅಸ್ತಿತ್ವದಲ್ಲಿತ್ತು.
ವೈದ್ಯಕೀಯ-ಬಳಕೆಗೆ ಸಂಶೋಧಿಸಲ್ಪಟ್ಟ ಹಲವಾರು ವಿಕಿರಣ ನ್ಯೂಕ್ಲೈಡ್ಗಳಲ್ಲಿ, ಯಾವೊಂದೂ ಕೂಡ ಟೆಕ್ನೆಟಿಯಮ್-99ಎಮ್ ನ ಸಂಶೋಧನೆ ಮತ್ತು ಅಭಿವೃದ್ಧಿಯಷ್ಟು ಮಹತ್ವದ್ದಾಗಿರಲಿಲ್ಲ. ಇದು 1937 ರಲ್ಲಿ ಮೊದಲಿಗೆ ಸಿ. ಪೆರಿಯರ್ ಮತ್ತು ಇ. ಸೆಗ್ರೆ ಇವರುಗಳಿಂದ ಪೀರಿಯಾಡಿಕ್ ಟೇಬಲ್ನಲ್ಲಿ ಸ್ಥಳದ ಸಂಖ್ಯೆ 43 ಅನ್ನು ತುಂಬುವುದಕ್ಕೆ ಸಂಶೋಧಿಸಲ್ಪಟ್ಟಿತ್ತು. 1960ರ ದಶಕದ ಸಮಯದಲ್ಲಿ ಟೆಕ್ನೆಟಿಯಮ್-99ಎಮ್ ಅನ್ನು ಉತ್ಪಾದಿಸುವುದಕ್ಕೆ ಜನರೇಟರ್ ವ್ಯವಸ್ಥೆಯ ಬೆಳವಣಿಗೆಯು ವೈದ್ಯಕೀಯ ಬಳಕೆಯ ಒಂದು ಪ್ರಾಯೋಗಿಕ ವಿಧಾನವಾಗಿ ಬದಲಾಯಿತು. ಪ್ರಸ್ತುತದಲ್ಲಿ, ಟೆಕ್ನೆಟಿಯಮ್-99ಎಮ್ ಇದು ಅಣು ವೈದ್ಯಶಾಸ್ತ್ರದಲ್ಲಿ ಹೆಚ್ಚಾಗಿ ಬಳಸಿಕೊಳ್ಳಲ್ಪಡುತ್ತಿರುವ ಘಟಕವಾಗಿದೆ ಮತ್ತು ಇದು ಅಣು ವೈದ್ಯಶಾಸ್ತ್ರ ಚಿತ್ರಣದ ಅಧ್ಯಯನಗಳ ಹಲವಾರು ವಿಧಗಳಲ್ಲಿ ಬಳಸಿಕೊಳ್ಳಲ್ಪಡುತ್ತಿದೆ.
1970ರ ದಶಕದ ಸಮಯದ ವೇಳೆಗೆ ದೇಹದ ಹೆಚ್ಚಿನ ಭಾಗಗಳು ಅಣು ವೈದ್ಯಶಾಸ್ತ್ರ ಕಾರ್ಯವಿಧಾನಗಳನ್ನು ಬಳಸಿಕೊಂಡು ಗೋಚರಿಸುವಂತೆ ಮಾಡಲ್ಪಟ್ಟವು. 1971ರಲ್ಲಿ, ಅಮೇರಿಕಾದ ವೈದ್ಯಕೀಯ ಸಂಸ್ಥೆಯು ಅಣು ವೈದ್ಯಶಾಸ್ತ್ರವನ್ನು ಒಂದು ವೈದ್ಯಕೀಯ ಶಾಖೆಯಾಗಿ ವಿಧ್ಯುಕ್ತವಾಗಿ ಗುರುತಿಸಿತು.[೫] 1972 ರಲ್ಲಿ, ಅಣು ವೈದ್ಯಶಾಸ್ತ್ರದ ಅಮೇರಿಕದ ಮಂಡಳಿಯು ಸ್ಥಾಪನೆಗೊಳ್ಳಲ್ಪಟ್ಟಿತು, ಅದು ಅಣು ವೈದ್ಯಶಾಸ್ತ್ರವನ್ನು ಒಂದು ವೈದ್ಯಕೀಯ ಶಾಖೆಯಾಗಿ ಸಂಯೋಜಿಸಿತು.
1980 ರ ದಶಕದ ಸಮಯದಲ್ಲಿ, ವಿಕಿರಣ ಔಷಧವಸ್ತುಗಳು ಹೃದಯ ರೋಗದ ರೋಗನಿರ್ಣಯದ ಬಳಕೆಗೆ ವಿನ್ಯಾಸಗೊಳಿಸಲ್ಪಟ್ಟಿದ್ದವು. ಅದೇ ಸಮಯದಲ್ಲಿ, ಏಕೈಕ ಫೋಟಾನ್ ಹೊರಸೂಸುವಿಕೆಯ ತಲಲೇಖನದ ಬೆಳವಣಿಗೆಯು ಹೃದಯದ ಮೂರು-ಆಯಾಮದ ಪುನರ್ನಿರ್ಮಾಣಕ್ಕೆ ಕಾರಣವಾಯಿತು ಮತ್ತು ನ್ಯೂಕ್ಲಿಯರ್ ಹೃದಯ ವಿಜ್ಞಾನ ವಿಭಾಗದ ಸ್ಥಾಪನೆಗೆ ಕಾರಣವಾಯಿತು.
ಅಣು ವೈದ್ಯಶಾಸ್ತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮೊದಲ ಪಾಸಿಟ್ರಾನ್ ಉತ್ಸರ್ಜಕ ತಲಲೇಖನ ವಿಶ್ಲೇಷಕದ (ಪಿಇಟಿ) ಸಂಶೋಧನೆಯನ್ನು ಒಳಗೊಳ್ಳುತ್ತದೆ. ಹೊರಸೂಸುವಿಕೆ ಮತ್ತು ಸಂವಹನ ತಲಲೇಖನದ ವಿಷಯವು, ನಂತರದಲ್ಲಿ ಏಕೈಕ ಫೋಟಾನ್ ಉತ್ಸರ್ಜಕ ಲೆಕ್ಕ ಮಾಡಲ್ಪಟ್ಟ ತಲಲೇಖನವಾಗಿ (ಎಸ್ಪಿಇಸಿಟಿ) ಅಭಿವೃದ್ಧಿಗೊಳ್ಳಲ್ಪಟ್ಟಿತು, ಎಸ್ಪಿಇಸಿಟಿ ಇದು ಡೇವಿಡ್ ಇ. ಕುಹ್ಲ್ ಮತ್ತು ರಾಯ್ ಎಡ್ವರ್ಡ್ಸ್ ಇವರುಗಳಿಂದ 1950 ರ ದಶಕದ ಸಮಯದಲ್ಲಿ ಪರಿಚಯಿಸಲ್ಪಟ್ಟಿತು.[ಸೂಕ್ತ ಉಲ್ಲೇಖನ ಬೇಕು] ಅವರ ಕಾರ್ಯಗಳು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಹಲವಾರು ತಲಲೆಖನ ಉಪಕರಣಗಳ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕಾರಣವಾದವು. ತಲಲೆಖನ ಚಿತ್ರಣ ತಂತ್ರಗಾರಿಕೆಗಳು ವೈದ್ಯಶಾಸ್ತ್ರದ ವಾಷಿಂಗ್ಟನ್ ವಿಶ್ವವಿದ್ಯಾಲಯ ಸ್ಕೂಲ್ನಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿಗೊಳಿಸಲ್ಪಟ್ಟವು. ಈ ಸಂಶೋಧನೆಗಳು 1998 ರಲ್ಲಿ ಕ್ಯಾಲಿಫೋರ್ನಿಯಾ ಸ್ಯಾನ್ ಫ್ರಾನ್ಸಿಸ್ಕೋ (ಯುಸಿಎಸ್ಎಫ್) ವಿಶ್ವವಿದ್ಯಾಲಯದ ಬ್ರೂಸ್ ಹ್ಯಾಸೆಗಾವಾ ಮತ್ತು ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ಡಿ. ಡಬ್ಲು. ಟೌನ್ಸೆಂಡ್ರ ಮೊದಲ ಪಿಇಟಿ/ಸಿಟಿ ಎಸ್ಪಿಇಸಿಟಿ ಮತ್ತು ಸಿಟಿಯ ಜೊತೆಗೆ ಸಂಯೋಜನ ಚಿತ್ರಣಕ್ಕೆ ಕಾರಣವಾದವು [ಸೂಕ್ತ ಉಲ್ಲೇಖನ ಬೇಕು]. ಪಿಇಟಿ ಮತ್ತು ಪಿಇಟಿ/ಸಿಟಿ ಚಿತ್ರಣಗಳು ವಿಭಾಗದ ವೆಚ್ಚವನ್ನು ಭರಿಸುತ್ತ ಮತ್ತು ಸ್ಥಳದ ಮೇಲಿನ ಅಥವಾ ಹತ್ತಿರದ ಸೈಕ್ಲೋಟಾನ್ನ ತಮ್ಮ ಮುಂಚಿನ ವರ್ಷಗಳಲ್ಲಿ ನಿಧಾನವಾದ ಬೆಳವಣಿಗೆಯನ್ನು ಅನುಭವಿಸಿತು. ಆದಾಗ್ಯೂ, ಗ್ರಂಥಿ ವಿಜ್ಞಾನದಲ್ಲಿನ ನಿರ್ಬಂಧಿತ ಪಿಇಟಿ ಮತ್ತು ಪಿಇಟಿ/ಸಿಟಿ ಅನ್ವಯಿಕೆಗಳ ವೈದ್ಯಕೀಯ ವೆಚ್ಚ ಮರಳಿ ನೀಡುವಿಕೆಯನ್ನು ಅನುಮೋದಿಸುವ ಒಂದು ನಿರ್ವಹಣಾತ್ಮಕ ನಿರ್ಣಯವು ಕಳೆದ ಕೆಲವು ವರ್ಷಗಳಿಂದ ಗೋಚರ ಬೆಳವಣಿಗೆ ಮತ್ತು ವಿಸ್ತೃತ ಅಂಗೀಕಾರಕ್ಕೆ ಕಾರಣವಾಯಿತು. ಪಿಇಟಿ/ಸಿಟಿ ಚಿತ್ರಣವು ಪ್ರಸ್ತುತದಲ್ಲಿ ರೋಗನಿರ್ಣಯ, ನಿರೂಪಣೆ ಮತ್ತು ಚಿಕಿತ್ಸೆಯ ನಿರ್ವಹಣೆಗೆ ಗ್ರಂಥಿ ವಿಜ್ಞಾನದ ಒಂದು ಅವಿಚ್ಛೇದ ಭಾಗವಾಗಿದೆ.
ಕೆಲವು ವಿಕಿರಣ ನ್ಯೂಕ್ಲೈಡ್ಗಳ ಮೂಲ ಹಾಗೂ ಕೆಲವು ವಿಕಿರಣ ಔಷಧ ವಸ್ತುಗಳ ಕುರಿತಾದ ಟಿಪ್ಪಣಿ
[ಬದಲಾಯಿಸಿ]ವೈದ್ಯಕೀಯ ಐಸೋಟೋಪ್ಗಳ ಜಾಗತಿಕ ಪೂರೈಕೆಯ ಸುಮಾರು ಮೂರನೆಯ ಒಂದು ಭಾಗ, ಮತ್ತು ಉತ್ತರ ಅಮೇರಿಕಾದ ಪೂರೈಕೆಯ ಹೆಚ್ಚಿನ ಭಾಗಗಳು ಕೆನಡಾದ ಒಂಟಾರಿಯೋದ ಚಾಕ್ ನದಿಯಲ್ಲಿನ ಚಾಕ್ ನದಿಯ ಪ್ರಯೋಗಾಲಯಗಳಲ್ಲಿ ಉತ್ಪಾದಿಸಲ್ಪಡುತ್ತವೆ. (ಜಾಗತಿಕ ಪೂರೈಕೆಯ ಮತ್ತೊಂದು ಮೂರನೆಯ ಒಂದು ಭಾಗ, ಮತ್ತು ಯುರೋಪ್ನ ಹೆಚ್ಚಿನ ಪೂರೈಕೆಗಳು, ನೆದರ್ಲ್ಯಾಂಡ್ಸ್ನಲ್ಲಿನ ಪೆಟ್ಟೆನ್ ನ್ಯೂಕ್ಲಿಯರ್ ಪ್ರತಿಕ್ರಿಯಾಕಾರಿಯಲ್ಲಿ ಉತ್ಪಾದಿಸಲ್ಪಡುತ್ತವೆ.) ಕೆನಡಾದ ನ್ಯೂಕ್ಲಿಯರ್ ಸುರಕ್ಷಾ ಆಯೋಗವು ನವೆಂಬರ್ 18, 2007 ರಂದು ನಿಯಮಿತವಾಗಿ ನಿಯೋಜಿಸಲ್ಪಟ್ಟ ನಿರ್ವಹಣೆ ಮತ್ತು ಆಧುನಿಕ ಮಾನದಂಡಗಳಿಗೆ ಅನುಗುಣವಾಗಿ ಸುರಕ್ಷಾ ವ್ಯವಸ್ಥೆಗಳನ್ನು ಉತ್ತಮಗೊಳಿಸುವ ಸಲುವಾಗಿ ಎನ್ಆರ್ಯು ಪ್ರತಿಕ್ರಿಯಾಕಾರಿಗಳ ಮುಚ್ಚುವಿಕೆಗೆ ಆದೇಶ ನೀಡಿತು. ಉತ್ತಮಗೊಳಿಸುವಿಕೆಯು ನಿರೀಕ್ಷಿಸಿದ್ದಕ್ಕಿಂತ ದೀರ್ಘ ಅವಧಿಯನ್ನು ತೆಗೆದುಕೊಂಡಿತು ಮತ್ತು ಡಿಸೆಂಬರ್ 2007 ರಲ್ಲಿ ವೈದ್ಯಕೀಯ ಐಸೋಟೋಪ್ಗಳ ಒಂದು ವಿಷಮವಾದ ಕೊರತೆಯು ಸಂಭವಿಸಿತು. ಕೆನಡಾದ ಸರ್ಕಾರವು 16 ಡಿಸೆಂಬರ್ 2007 ರಂದು ಪ್ರತಿಕ್ರಿಯಾಕಾರಿ ಅನ್ನು ಪುನರಾರಂಭ ಮಾಡುವುದಕ್ಕೆ ಮತ್ತು ವೈದ್ಯಕೀಯ ಐಸೋಟೋಪ್ಗಳ ಉತ್ಪಾದನೆಯನ್ನು ಮುಂದುವರೆಸುವುದಕ್ಕೆ ಸರ್ವಾನುಮತದಿಂದ ತುರ್ತು ಪರಿಸ್ಥಿತಿಯ ಶಾಸನವನ್ನು ಅನುಮೋದಿಸಿತು. ನ್ಯೂಟ್ರಾನ್ಗಳ ಜೊತೆಗೆ ಭೌತಿಕ ವಸ್ತುಗಳನ್ನು ಹೊಳೆಯುವಂತೆ ಮಾಡುವುದಕ್ಕೆ ಬಳಸಿಕೊಳ್ಳಲ್ಪಟ್ಟ ಚಾಕ್ ನದಿಯ ಪ್ರತಿಕ್ರಿಯಾಕಾರಿಗಳು U-235ದ ವಿದಳನದ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲ್ಪಟ್ಟವು. ಈ ನ್ಯೂಟ್ರಾನ್ಗಳು ಒಂದು ನ್ಯೂಟ್ರಾನ್ ಅನ್ನು ಸಂಯೋಜಿಸುವ ಮೂಲಕ, ಅಥವಾ ನ್ಯೂಕ್ಲಿಯರ್ ವಿದಳನ ಪ್ರಕ್ರಿಯೆಯಲ್ಲಿ ಇದನ್ನು ವಿಭಜಿಸುವ ಮೂಲಕ ಹೊಳೆಯುವಂತೆ ಮಾಡಲ್ಪಟ್ಟ ಭೌತಿಕ ವಸ್ತುವಿನ ಬೀಜಕೇಂದ್ರವನ್ನು ಬದಲಾಯಿಸುತ್ತವೆ. ಒಂದು ಪ್ರತಿಕ್ರಿಯಾಕಾರಿಯಲ್ಲಿ, ಯುರೇನಿಯಮ್ನ ಒಂದು ವಿದಳನ ಉತ್ಪನ್ನವು ಮೊಲಿಬ್ಡೆನಮ್-99 ಆಗಿದೆ, ಅದು ಹೊರತೆಗೆಯಲ್ಪಡುತ್ತದೆ ಮತ್ತು ಉತ್ತರ ಅಮೇರಿಕಾದೆಲ್ಲೆಡೆಯ ವಿಕಿರಣ ಔಷಧವಸ್ತುಗಳ ಮಳಿಗೆಗೆ ರವಾನಿಸಲ್ಪಡುತ್ತದೆ. ಮೊಲಿಬ್ಡೆನಮ್-99 ಇದು ವಿಕಿರಣಶೀಲವಾಗಿ 2.7 ದಿನಗಳ ಅರ್ಧ-ಜೀವನದ ಜೊತೆಗಿರುವ ಬೀಟಾ ಅವನತಿಯಾಗಿದೆ, ಅದು ಪ್ರಾಥಮಿಕವಾಗಿ ಟಿಸಿ-99ಎಮ್ಗೆ ಬದಲಾಗುತ್ತದೆ, ಅದು ನಂತರದಲ್ಲಿ ಒಂದು "ಮೊಲಿ ಕೌ"ನಿಂದ ತೆಗೆದುಕೊಳ್ಳಲ್ಪಡುತ್ತದೆ (ಮಿಲ್ಕ್ಡ್) (ಟೆಕ್ನೆಟಿಯಮ್-99ಎಮ್ ಜನರೇಟರ್ ಅನ್ನು ನೋಡಿ). ನಂತರದಲ್ಲಿ ಟಿಸಿ-99ಎಮ್ ಇದು ಗ್ಯಾಮಾ ಕ್ಯಾಮರಾಗಳಿಂದ ಸಂಶೋಧಿಸಲ್ಪಟ್ಟ ಒಂದು ಗ್ಯಾಮಾ ಫೋಟಾನ್ ಅನ್ನು ಬಿಡುಗಡೆ ಮಾಡುವಾಗ ರೋಗಿಯ ದೇಹದ ಒಳಗಿರುವ ಸಂದರ್ಭದಲ್ಲಿ ಇನ್ನೂ ಹೆಚ್ಚು ಅವನತಿಗೊಳ್ಳುತ್ತದೆ. ಇದು ತನ್ನ ಮೂಲ ಸ್ಥಿತಿಯಾದ ಟಿಸಿ-99ಎಮ್ ವರೆಗೆ ಅವನತಿ ಹೊಂದುತ್ತದೆ, ಅದು ಟಿಸಿ-99ಎಮ್ಗೆ ಹೋಲಿಸಿ ನೋಡಿದಾಗ ತುಲನಾತ್ಮಕವಾಗಿ ವಿಕಿರಣಶೀಲ-ಆಗಿರುವುದಿಲ್ಲ. ಪಿಇಟಿ ಎಫ್-18 ನಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವ ವಿಕಿರಣ ಐಸೋಟೋಪ್ ಯಾವುದೇ ನ್ಯೂಕ್ಲಿಯರ್ ಪ್ರತಿಕ್ರಿಯಾಕಾರಿಯಲ್ಲಿ ಉತ್ಪಾದಿಸಲ್ಪಡುವುದಿಲ್ಲ, ಆದರೆ ಅದು ಒಂದು ವೃತ್ತಾಕಾರ ವರ್ಧಿತದಲ್ಲಿ ಒಂದು ಸೈಕ್ಲೋಟ್ರಾನ್ ಎಂದು ಕರೆಯಲ್ಪಡುತ್ತದೆ. ಸೈಕ್ಲೋಟ್ರಾನ್ ಇದು ಆಮ್ಲಜನಕದ O-18 ಸ್ಥಿರವಾದ ಭಾರವುಳ್ಳ ಐಸೋಟೋಪ್ಗಳನ್ನು ಉತ್ತೇಜಿಸುವುದಕ್ಕೆ ಪ್ರೋಟಾನ್ಗಳನ್ನು ವರ್ಧಿಸುವುದಕ್ಕೆ ಬಳಸಲ್ಪಡುತ್ತದೆ. ಇದು ಯಾವುದರಿಂದ ತೆಗೆದುಕೊಳ್ಳಲ್ಪಡುತ್ತದೆಯೋ ಆ ಸಾಮಾನ್ಯ ಆಮ್ಲಜನಕದ (ಹೆಚ್ಚಾಗಿ O-16) ಸುಮಾರು 0.20% ಅನ್ನು ಸಂಯೋಜಿಸುತ್ತದೆ. ಎಫ್-18 ಇದು ನಂತರದಲ್ಲಿ ವಿಶಿಷ್ಟವಾಗಿ ಎಫ್ಡಿಜಿ ಅನ್ನು ಉತ್ಪಾದಿಸುವುದಕ್ಕೆ ಬಳಸಲ್ಪಡುತ್ತದೆ (ಈ ಪ್ರಕ್ರಿಯ ಬಗೆಗಿನ ಹೆಚ್ಚಿನ ಮಹಿತಿಗಾಗಿ ಈ ಲಿಂಕ್ ಅನ್ನು ನೋಡಿ).
[೬][೭]ಐಸೋಟೋಪ್ | ಚಿಹ್ನೆ | Z | ಟಿ1/2 | ಅವನತಿ ಹೊಂದು | ಫೋಟಾನ್ಗಳು | β |
---|---|---|---|---|---|---|
Imaging: | ||||||
ಫ್ಲೋರಿನ್-18 | 18ಎಫ್ | 9 | 109.77 ಎಮ್ | β+ + | 511 (193%) | 0.664 (97%) |
ಗ್ಯಾಲಿಯಮ್-67 | 67Ga | 31 | 3.26 d | ec | 93 (39%), 185 (21%), 300 (17%) |
- |
ಕ್ರಿಪ್ಟಾನ್-81m | 81mKr | 36 | 13.1 s | IT | 190 (68%) | - |
ರುಬಿಡಿಯಮ್-82 | 82Rb | 37 | 1.27 m | β+ | 511 (191%) | 3.379 (95%) |
ಟೆಕ್ನೆಟಿಯಮ್-99ಎಮ್ | 99ಎಮ್ಟಿಸಿ | 43 | 6.01 h | IT | 140 (89%) | - |
ಇಂಡಿಯಮ್-111 | 111In | 49 | 2.80 d | ec | 171 (90%), 245 (94%) |
- |
ಅಯೋಡಿನ್-123 | 123I | 53 | 13.3 h | ec | 159 (83%) | - |
ಕ್ಸೆನಾನ್-133 | 133Xe | 54 | 5.24 d | β- | 81 (31%) | 0.364 (99%) |
ಥಾಲಿಯಮ್-201 | 201Tl | 81 | 3.04 d | ec | 69–83* (94%), 167 (10%) |
- |
ಚಿಕಿತ್ಸೆ: | ||||||
ವೈಟ್ರಿಯಮ್-90 | 90Y | 39 | 2.67 d | β- | - | 2.280 (100%) |
ಅಯೋಡಿನ್-131 | 131I | 53 | 8.02 d | β- | 364 (81%) | 0.807 (100%) |
ಝಡ್ = ಆಟೋಮಿಕ್ ಸಂಖ್ಯೆ, ಪ್ರೋಟಾನ್ಗಳ ಸಂಖ್ಯೆ; ಟಿ1/2 = ಅರ್ಧ-ಜೀವನ; ಅವನತಿ ಹೊಂದು = ಅವನತಿ ಹೊಂದುವಿಕೆಯ ವಿಧಾನ
ಹೆಚ್ಚು ಸಾಮಾನ್ಯವಾಗಿ ಬಳಸಿಕೊಳ್ಳಲ್ಪಡುವ ಅನಿಲವನ್ನು ಹೊಂದಿದ/ವಾಯುಕಲಿಲ ವಿಕಿರಣ ನ್ಯೂಕ್ಲೈಡ್ಗಳೆಂದರೆ:
ವಿಶ್ಲೇಷಣೆ[ಬದಲಾಯಿಸಿ]ಅಣು ವೈದ್ಯಶಾಸ್ತ್ರದ ಚಿತ್ರಣ ವಿಧಾನದ ಕೊನೆಯ ಫಲಿತಾಂಶವೆಂದರೆ ಒಂದು ಅಥವಾ ಹೆಚ್ಚಿನ ಚಿತ್ರಗಳನ್ನು ಹೊಂದಿರುವ "ದತ್ತಾಂಶಗಳ ಪಟ್ಟಿ". ಅನೇಕ ಚಿತ್ರಗಳ ದತ್ತಾಂಶಪಟ್ಟಿಯಲ್ಲಿ ಚಿತ್ರಗಳ ಓರಣವನ್ನು ಸಮಯದ ಸರಣಿಯನ್ನು ಪ್ರತಿನಿಧಿಸುತ್ತದೆ (ಅದೆಂದರೆ ಸೈನ್ ಅಥವಾ ಚಲನಚಿತ್ರ) ಕಾರ್ಡಿಯಾಕ್ ಗೇಟೆಡ್ ಸಮಯದ ಸರಣಿ ಅಥವಾ ಗಾಮಾ-ಕ್ಯಾಮರಾ ರೋಗಿಯ ಸುತ್ತ ಸರಿಯಾಗಿ ಚಲಿಸಬಲ್ಲ ಸ್ಥಳಾವಕಾಶದ ಸರಣಿಯಾದ ಇದನ್ನು ಕೆಲವೊಮ್ಮೆ "ಚಲಿಸಬಲ್ಲ" ದತಾಂಶಪಟ್ಟಿ ಎಂದೂ ಕರೆಯಲಾಗುತ್ತದೆ. ಸ್ಪೆಕ್ಟ್ (ಏಕ ಫೋಟಾನ್ ಉತ್ಸರ್ಜನ ಗಣಕೀಕೃತ ತಲಲೇಖನ) ಎಂಬ ವಿಧಾನದಲ್ಲಿ ಚಿತ್ರಗಳು ತಿರುಗುವ ಗಾಮಾ-ಕ್ಯಾಮರಾದಿಂದ "ಪದರ"ವನ್ನು ಚಿತ್ರೀಕರಿಸಿ ಅದನ್ನು ಪುನಃರಚಿಸಿ ರೋಗಿಯಿರುವ ನಿರ್ಧಿಷ್ಟ ಸ್ಥಳವನ್ನು ಸೆರೆಹಿಡಿಯಬಹುದಾಗಿದೆ. ರೋಗಿಯ ಸಮಾನಾಂತರವಾದ ಮೂರು-ಆಯಾಮಗಳ ಪ್ರದರ್ಶನವಾದ ರೇಡಿಯೋನ್ಯೂಕ್ಲೈಡ್ ವಿತರಣೆಯನ್ನು ಪದರ-ಸಂಗ್ರಹದ ಮೂಲಕ ಸಂಗ್ರಹವಾಗಿದೆ. ಅಣು ವೈದ್ಯಶಾಸ್ತ್ರಗಳಲ್ಲಿ ಪರಿಮಾಣ ಸಂಬಂಧಿ ವಿಶ್ಲೇಷಣಾ ಪೊಟ್ಟಣಗಳನ್ನು ಪ್ರತಿಯೊಂದು ನಿರ್ದಿಷ್ಟ ಚಿತ್ರೀಕರಣ ತಂತ್ರಜ್ಞಾನಗಳೆಗೆ ಒದಗಿಸಲು ಅಣು ವೈದ್ಯಶಾಸ್ತ್ರ ಕಂಪ್ಯೂಟರ್ ಮಿಲಿಯನ್ಗಟ್ಟಲೆ ಮೂಲ ಸಂಕೇತಗಳ ಸಾಲನ್ನು ಬಯಸುತ್ತವೆ. ಚಲನಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳಾದ ಬಹು ಹಂತದ ಮಾದರಿಗಳು ಅಥವಾ ಪಟ್ಲಾಕ್ ಪಾಟ್ಗಳನ್ನು ಬಳಸಿ ಸಮಯ ಸರಣಿಗಳನ್ನು ಇನ್ನೂ ವಿಶ್ಲೇಷಣೆಗೊಳಪಡಿಸಬಹುದು. ವಿಕಿರಣ ಪ್ರಮಾಣ[ಬದಲಾಯಿಸಿ]ಅಣು ವೈದ್ಯಶಾಸ್ತ್ರ ವಿಧಾನಕ್ಕೊಳಪಡುವ ರೋಗಿಯನ್ನು ವಿಕಿರಣಕ್ಕೆ ಒಳಪಡಿಸಲಾಗುತ್ತದೆ. ಅಂತರಾಷ್ಟ್ರೀಯ ನಿರ್ದೇಶನದ ಪ್ರಕಾರ ವಿಕಿರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದರೂ ಅಪಾಯವನ್ನುಂಟುಮಾಡುತ್ತದೆ. ಅಣು ವೈದ್ಯಶಾಸ್ತ್ರ ತಪಾಸಣೆಗೊಳಪಡಿಸಿ ನೀಡಿದ ವಿಕಿರಣಗಳು ರೋಗಿಯಲ್ಲಿ ಕ್ಯಾನ್ಸರನ್ನೊಳಗೊಂಡಂತೆ ಅಲ್ಪಪ್ರಮಾಣದ ಹಾನಿಯನ್ನುಂಟುಮಾಡುತ್ತದೆ. ಎಕ್ಸ್ ರೇ ಉಪಕಣದಂತಹ ಹೊರ ಮೂಲದಿಂದ ದೇಹದ ಒಳಭಾಗಕ್ಕೆ ಕೊಡದ ಹೊರತು ಇದರ ಅಪಾಯಗಳು ಎಕ್ಸ್-ರೇ ತಪಾಸಣೆಗೊಳಪಡಿಸಿದಂತೆಯೇ ಇರುತ್ತದೆ. ಅಣು ವೈದ್ಯಶಾಸ್ತ್ರದ ತಪಾಸಣೆಗಾಗಿ ಹರಿಸುವ ವಿಕಿರಣ ಪ್ರಮಾಣವನ್ನು ಸೀವರ್ಟ್ ಘಟಕದ ಪರಿಣಾಮಕಾರೀ ಪ್ರಮಾಣ (ಸಾಮಾನ್ಯವಾಗಿ ಮಿಲಿ ಸೀವರ್ಟ್ನ್ನು ಬಳಸುವರು, mSv) ಎಂದು ಕರೆಯುವರು. ತಪಾಸಣೆಗೊಳಪಡಿಸಿದ ಪರಿಣಾಮಕಾರೀ ಘಟಕವು ಮೆಗಾ ಬೆಕ್ವೆರಲ್(MBq) ನಿರ್ವಹಣೆಗೊಳಪಟ್ಟ ವಿಕಿರಣದ ಪ್ರಭಾವಕ್ಕೊಳಪಟ್ಟಿರುತ್ತದೆ, ರೇಡಿಯೋಫಾರ್ಮಾಸಿಟಿಕಲ್ನ ಭೌತಿಕ ಗುಣಗಳನ್ನು ಬಳಸುತ್ತಾರೆ, ದೇಹದಲ್ಲಿ ಇದರ ವಿತರಣೆ ಮತ್ತು ದೇಹದಿಂದ ನಿರ್ಮೂಲನಾ ಮಟ್ಟವನ್ನು ತಿಳಿಯಲಾಗುತ್ತದೆ. ಪರಿಣಾಮಕಾರೀ ಘಟಕದ ಪ್ರಮಾಣವು 3 MBq ಕ್ರೋಮಿಯಮ್-51ನ ಅಳತೆಯ ಗ್ಲೊಮೆರುಲರ್ ಸೋಸುವಿಕೆಯ ದರವು 6 μSv (0.006 mSv)ಯಿಂದ 150 MBq ಥಾಲಿಯಮ್ 3-201ರ ಅನಿರ್ಧಿಷ್ಟ ಚಿತ್ರೀಕರಣ ವಿಧಾನದ 7 mSvವರೆಗೆ ಇರುತ್ತದೆ. ಸಾಮಾನ್ಯ ಮೂಳೆಯ ಸ್ಕ್ಯಾನ್ ಟೆಕ್ನೀಶಿಯನ್ 99m-MDPಯ 600 MBqನ ಸುಮಾರು 3.5 mSv (1) ಪರಿಣಾಮಕಾರೀ ಪ್ರಮಾಣವನ್ನು ಹೊಂದಿರುತ್ತದೆ. ಮೊದಲು ಇದನ್ನು ಅಳೆಯಲು ಕ್ಯೂರಿ(Ci)ಯನ್ನು ಬಳಸುತಿದ್ದರು, ಇದು 3.7E10 Bq ಆಗಿತ್ತು ಮತ್ತೂ 1.0 ಗ್ರಾಮ್ಗಳಷ್ಟು ರೇಡಿಯಮ್ (Ra-226) ಅಗಿರುತಿತ್ತು; ರಾಡ್ (ವಿಕಿರಣವನ್ನು ಹೀರಿಕೊಂಡ ಪ್ರಮಾಣ)ವನ್ನು ಈಗ ಗ್ರೇ ಬದಲಾಯಿಸಿದೆ; ಮತ್ತು ರೆಮ್ (ರಾಂಟಜೆನ್ ಸಮಾನವಾದ ಪುರುಷ)ನನ್ನು ಸೀವರ್ಟ್ ಆಕ್ರಮಿಸಿದೆ. ರಾಡ್ ಮತ್ತು ರೆಮ್ಗಳು ಹೆಚ್ಚು ಕಡಿಮೆ ಅಣು ವೈದ್ಯಶಾಸ್ತ್ರ ವಿಧಾನಗಳೆಗೆ ಸಮನಾಗಿದೆ, ಮತ್ತು ಕೇವಲ ಆಲ್ಫ ವಿಕಿರಣವು ಹೆಚ್ಚಿನ ರೆಮ್ ಅಥವಾ Sv ಮೌಲ್ಯವನ್ನುಂಟುಮಾಡುತ್ತದೆ, ಏಕೆಂದರೆ ಇದು ರಿಲೇಟಿವ್ ಬಯಾಲಾಜಿಕಲ್ ಎಫೆಕ್ಟೀವ್ನೆಸ್ (RBE)ಗಳಿಗೆ ಸರಿಹೊಂದುತ್ತದೆ. ಅಣು ವೈದ್ಯಶಾಸ್ತ್ರ ಆಲ್ಫ ಉತ್ಸರ್ಜಕಗಳನ್ನು ಈಗ ಹೆಚ್ಚು ಬಳಸುತ್ತಿಲ್ಲ, ಆದರೆ ನ್ಯೂಕಿಯಾರ್ ಪ್ರತಿಕ್ರಿಯಾಕಾರಿ ಮತ್ತು ವೇಗೋತ್ಕರ್ಷಕ ಉತ್ಪಾದಿಸಿದ ರೇಡಿಯೋನ್ಯೂಕ್ಲೈಡ್ಗಳನ್ನು ಕಂಡುಹಿಡಿಯುವ ಮೊದಲು ಹೆಚ್ಚು ಬಳಸಲಾಗುತಿತ್ತು. ಆರೋಗ್ಯ ಭೌತವಿಜ್ಞಾನ ಕ್ಷೇತ್ರವು ಮಾನವನನ್ನು ವಿಕಿರಣಗಳಿಗೆ ಒಡ್ದುವ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ. ಅಣು ವೈದ್ಯಶಾಸ್ತ್ರದಲ್ಲಿ ಉದ್ಯೋಗಾವಕಾಶ[ಬದಲಾಯಿಸಿ]ಅಣು ವೈದ್ಯಶಾಸ್ತ್ರ ತಂತ್ರಜ್ಞರು[ಬದಲಾಯಿಸಿ]ಅಣು ವೈದ್ಯಶಾಸ್ತ್ರ ಸಮಾಜದ (SNM) ವೆಬ್ಸೈಟ್ನಲ್ಲಿನ ವಿಜ್ಞಾನಿಗಳ ಉದ್ಯೋಗವಕಾಶ ಕ್ಷೇತ್ರದಿಂದ ಕೆಳಗಿನ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ವಿಧ್ಯಾಭ್ಯಾಸದ ಅಗತ್ಯತೆಗಾಗಿ ತರಬೇತಿ ವಿಭಾಗವನ್ನು ನೋಡಿ [೮] ಅಣು ವೈದ್ಯಶಾಸ್ತ್ರ ವಿಜ್ಞಾನಿಗಳ ಕೆಲಸವು ಅಣು ವೈದ್ಯಶಾಸ್ತ್ರ ಚಿಕಿತ್ಸಕರ ಕೆಲಸಕ್ಕೆ ಹತ್ತಿರವಾದುದಾಗಿದೆ. ವಿಜ್ಞಾನಿಗಳ ಕೆಲವು ಪ್ರಾಥಮಿಕ ಕರ್ತವ್ಯಗಳೆಂದರೆ:
ಚಿತ್ರಣ ವಿಧಾನದಲ್ಲಿ, ವಿಜ್ಞಾನದಲ್ಲಿ ನೇರವಾಗಿ ರೋಗಿಗಳೊಂದಿಗೆ ಕೆಲಸ ಮಾಡುತ್ತಾರೆ. ವಿಜ್ಞಾನಿಗಳು:
ಅಣು ವೈದ್ಯಶಾಸ್ತ್ರ ವಿಜ್ಞಾನಿಗಳು ಅನೇಕ ವೈವಿಧ್ಯ ಚಿಕಿತ್ಸಕ ತಾಣಗಳಲ್ಲಿ ಕೆಲಸ ಮಾಡುತ್ತಾರೆ, ಅವೆಂದರೆ
ಅಣು ವೈದ್ಯಶಾಸ್ತ್ರದಲ್ಲಿ ವೈದ್ಯ ವೃತ್ತಿ[ಬದಲಾಯಿಸಿ]ಅಣು ಚಿಕಿತ್ಸೆಯ ವೈದ್ಯರ ಮೊದಲ ಜವಾಬ್ದಾರಿ ಎಂದರೆ ಅಣು ಚಿಕಿತ್ಸೆಯ ಸ್ಕ್ಯಾನ್ ವಿಶ್ಲೇಷಿಸುವುದು ಮತ್ತು ಕ್ಯಾನ್ಸರ್ ಥೈರಾಯಿಡ್ ಖಾಯಿಲೆ ಮತ್ತು ಮೂಳೆ ಸೆಳೆತದ ಶಮನಕಾರಕ ಚಿಕಿತ್ಸೆಗಳಿಗೆ ವ್ಯಾಖ್ಯಾನ ನೀಡುವುದು. ವೈದ್ಯರು ಅಣು ವೈದ್ಯಶಾಸ್ತ್ರದಲ್ಲಿ ತಜ್ಞತೆ ಪಡೆದುಕೊಳ್ಳಲು ವಿವಿಧ ಕಾರಣಗಳಿವೆ. ಅಣು ಭೌತಶಾಸ್ತ್ರ ಮತ್ತು ವೈದ್ಯಕೀಯ ಚಿತ್ರಣಗಳಲ್ಲಿ ಆಸಕ್ತಿಗಳಿಗೆ ಅನುಗುಣವಾಗಿ ಕೆಲವು ವೈದ್ಯರು ಅಣು ವೈದ್ಯಶಾಸ್ತ್ರಜ್ಞರಾಗುತ್ತಾರೆ. ಇನ್ನೂ ಕೆಲವರು ಬೇರೆ ಬೇರೆ ವಿಷಯಗಳ ಮೇಲೆ ತಜ್ಞತೆ ಪಡೆದ ನಂತರ ಅಣು ವೈದ್ಯಶಾಸ್ತ್ರದ ಕಡೆ ಹೊರಳುತ್ತಾರೆ ಏಕೆಂದರೆ ಇದರಲ್ಲಿ ನಿಯಮಿತವಾದ ಕೆಲಸದ ವೇಳೆ ಇದೆ (ಒಂದು ದಿನಕ್ಕೆ ಎಂಟರಿಂದ ಹತ್ತು ಗಂಟೆಗಳು ಮಾತ್ರ) ಅಣು ವೈದ್ಯಕೀಯಲ್ಲಿ ಮತ್ತು ಅಣು ಚಿತ್ರಣದಲ್ಲಿ ಸಂಶೋಧನೆಗೆ ಅಪಾರ ಅವಕಾಶಗಳಿರುವುದರಿಂದ ಕೆಲವರು ಅಣು ವೈದ್ಯಶಾಸ್ತ್ರ ಆರಿಸಿಕೊಳ್ಳುತ್ತಾರೆ. ಅಣು ವೈದ್ಯಶಾಸ್ತ್ರಜ್ಞರು ಕೆಲವೊಮ್ಮೆ ವೈದ್ಯಕೀಯಕ್ಕೆ ಸಂಬಂಧಪಟ್ಟ ವಿವಿಧ ವೈದ್ಯಕೀಯ ಪ್ರಕರಣಗಳಲ್ಲಿ ತಜ್ಞತೆ ಪಡೆದುಕೊಳ್ಳಲು ಆಸಕ್ತರಾಗಿರುತ್ತಾರೆ. ಹೆಚ್ಚು ಆಕ್ರಮಣಶೀಲ ಅಥವಾ ಅಪಾಯಕರ ಕಾರ್ಯವಿಧಾನದಿಂದ ರೋಗಿಗಳನ್ನು ರಕ್ಷಿಸಲು ಮತ್ತು ಮೊದಲಿದ್ದ ಖಾಯಿಲೆಯನ್ನು ಪತ್ತೆ ಹಚ್ಚಲು ಅಣು ವೈದ್ಯಶಾಸ್ತ್ರ ಸಹಾಯಕವಾಗಬಹುದು ಎಂಬುದನ್ನು ನಿರೂಪಿಸಿದೆ. ಸಂಕೀರ್ಣ ಅಥವಾ ಸಂದೇಹಾತ್ಮಕ ವೈದ್ಯಕೀಯ ಪ್ರಕರಣಗಳಲ್ಲಿ ಅಣು ವೈದ್ಯಶಾಸ್ತ್ರಜ್ಞರನ್ನು ಕಾಣಬಹುದು. ಇತರೆ ವೈದ್ಯರ ಸಲಹೆಯ ಜೊತೆಗೆ ಅಣು ವೈದ್ಯಶಾಸ್ತ್ರಜ್ಞರು ವಿವಿಧ ಅಣು ವೈದ್ಯ ಚಿಕಿತ್ಸೆಗಳ (ಉದಾಹರಣೆಗೆ I131 ಥೈರಾಯಿಡ್ ಚಿಕಿತ್ಸೆ, ದುಗ್ಧರಸ ಗ್ರಂಥಿಯಲ್ಲಿ ಆಗುವ ಕ್ಯಾನ್ಸರ್ ಗಡ್ಡೆ ಯಾವುದೇ ಚಿಕಿತ್ಸೆಗೆ ಸ್ಪಂದಿಸದಿದ್ದಾಗ ನೀಡಲಾಗುವ ಚಿಕಿತ್ಸೆ, ಮೂಳೆ ಸೆಳೆತದ ಶಮನಕಾರಕ ಚಿಕಿತ್ಸೆ)ಮೂಲಕ ರೋಗಿಗಳ ಜೊತೆಗೆ ನೇರವಾಗಿ ಸಂಬಂಧ ಹೊಂದಬಹುದು. ಅಣು ವೈದ್ಯಶಾಸ್ತ್ರದ ಅನಾನುಕೂಲತೆಗಳೆಂದರೆ ಇದು ವೈದ್ಯಕೀಯ ಕ್ಷೇತ್ರದ ವಿಶೇಷ ಪ್ರಕಾರವಾಗಿದ್ದು ಇದರಲ್ಲಿ ಸೇವೆ ಸಲ್ಲಿಸುವ ವೈದ್ಯರು ಹೆಚ್ಚು ಹಣ ಗಳಿಸಲು ಸಾಧ್ಯವಾಗುವುದಿಲ್ಲ ಮತ್ತು ಉದ್ಯೋಗಾವಕಾಶಗಳು ಕಡಿಮೆ. ಇದರಲ್ಲಿನ ಅನುಕೂಲತೆಗಳೆಂದರೆ ಉದ್ಯೋಗ ನೀಡುವ ತೃಪ್ತಿ ಮತ್ತು ಇತರ ವೈದ್ಯಕೀಯ ವಿಭಾಗಗಳಿಗಿಂತ ಹೆಚ್ಚು ನಿಯಮಿತವಾದ ಕೆಲಸದ ಅವಧಿಯನ್ನು ಹೊಂದಿದೆ. ಕೆಲವೊಮ್ಮೆ ತುಂಬಾ ಅಪರೂಪವಾಗಿ ಮಾತ್ರ ತುರ್ತು ಕೆಲಸ ಬರಬಹುದು. ಅಣು ವೈದ್ಯಕೀಯ ಪರೀಕ್ಷಾಕಾಲ/ತರಬೇತಿ (ವೈದ್ಯರು)[ಬದಲಾಯಿಸಿ]ಈ ಕೆಳಗಿನ ಮಾಹಿತಿಗಳನ್ನು ಅಮೆರಿಕಾದ ಅಣು ವೈದ್ಯಶಾಸ್ತ್ರ ಮಂಡಳಿ(ಎಬಿಎನ್ಎಂ)ಯಿಂದ ಅಳವಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ABNM ನೋಡಿ.[೯] ಅಮೆರಿಕಾಸಂಯುಕ್ತ ಸಂಸ್ಥಾನದಲ್ಲಿ ಲಿಯಾಯ್ಸನ್ ಮಮಿಟಿ ಆನ್ ಮೆಡಿಕಲ್ ಎಜುಕೇಶನ್ ಅಥವಾ ದಿ ಅಮೆರಿಕನ್ ಅಸೋಸಿಯೇಷನ್ ಆಫ್ ಕಾಲೇಜಸ್ ಆಸ್ಟಿಯೋಪೆಥಿಕ್ ಮೆಡಿಸಿನ್ನಿಂದ ಅನುಮತಿ ಪಡೆದ ವೈದ್ಯಕೀಯ ವಿದ್ಯಾಲಯಗಳಿಂದ ಪದವಿ ಪಡೆದಿರುವ ಸಾಮಾನ್ಯ ವೃತ್ತಿಪರ ಶಿಕ್ಷಣದ ಅವಶ್ಯಕತೆ ಇದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಡಾಕ್ಟರ್ ಪದವಿಯ ನಂತರ ಅಣು ವೈದ್ಯಶಾಸ್ತ್ರದಲ್ಲಿ ತರಬೇತಿಯ ಪಡೆಯಲು ಮೂರು ವಿಧಾನಗಳಿವೆ:
ಇವನ್ನೂ ನೋಡಿ[ಬದಲಾಯಿಸಿ]
ಟಿಪ್ಪಣಿಗಳು[ಬದಲಾಯಿಸಿ]
ಹೆಚ್ಚಿನ ಓದಿಗಾಗಿ[ಬದಲಾಯಿಸಿ]
ಬಾಹ್ಯ ಕೊಂಡಿಗಳು[ಬದಲಾಯಿಸಿ]Wikibooks has a book on the topic of: Basic Physics of Nuclear Medicine
|
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Articles with unsourced statements from March 2010
- Articles with invalid date parameter in template
- Articles with hatnote templates targeting a nonexistent page
- ನ್ಯೂಕ್ಲಿಯರ್ ವೈದ್ಯಶಾಸ್ತ್ರ
- ವೈದ್ಯಕೀಯ ಚಿತ್ರಣ
- ವೈದ್ಯಕೀಯ ವಿಶೇಷತೆಗಳು
- ತಜ್ಞ ವೈದ್ಯಕೀಯ ಚಿಕಿತ್ಸಕರು
- ಆರೋಗ್ಯಸೇವಾ ಉದ್ಯೋಗಗಳು